ಬೆಂಗಳೂರು, ನ.13(Daijiworld News/SS): ನಗರದ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್'ಗೆ ಎರಡನೇ ದಿನವೂ ಚಿಕಿತ್ಸೆ ಮುಂದುವರಿದಿದೆ.
ಅಕ್ರಮ ಹಣ ಹೊಂದಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗ ಡಿಕೆ ಶಿವಕುಮಾರ್ಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ ಹತ್ತು ದಿನದ ಹಿಂದೆಯಷ್ಟೇ ಡಿಕೆಶಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಜೈಲಿನಿಂದ ಹೊರಬಂದ ನಂತರವೂ ಮಾನಸಿಕ ಒತ್ತಡ, ತಿರುಗಾಟ, ಟೆನ್ಷನ್ ಹೆಚ್ಚಾಗಿತ್ತು. ಕೆಲವು ದಿನಗಳಿಂದ ತಿರುಗಾಟ ಜಾಸ್ತಿ ಆಗಿದ್ದರಿಂದ ನ.11ರ ರಾತ್ರಿ ಇದ್ದಕ್ಕಿದ್ದಂತೆ ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ಎದೆನೋವು ಮತ್ತು ಹೈ ಬಿಪಿ ಹಿನ್ನೆಲೆಯಲ್ಲಿ ಡಿಕೆಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎದೆನೋವು ಕಡಿಮೆ ಆಗಿದೆ. ಹೈ ಬಿಪಿ ಸ್ವಲ್ಪ ಕಂಟ್ರೋಲ್'ಗೆ ಬಂದಿದ್ದು, ಬೆನ್ನು ನೋವಿನ ಸಮಸ್ಯೆ ಹಾಗೆಯೇ ಇದೆ. ಅಲ್ಲದೆ ಎರಡೂ ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.