ಬೆಂಗಳೂರು, ನ13 (Daijiworld News/ MB): ಮಂಗಳೂರು ಮೂಲದ ಯುವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.
ಮೃತ ಯುವಕ ಮಿಹಿರ್ ರೆಬೆಲ್ಲೊರವರು ಮಂಗಳೂರಿನ ಡಾ. ಸುಬೀರ್ ಮತ್ತು ಲೊರೆಟ್ಟಾ ರೆಬೆಲ್ಲೊರವರ ಪುತ್ರ.
ಈತ ಕಾಫಿ ಬೆಳೆಗಾರರ ಕುಟುಂಬದಿಂದ ಬಂದಿದ್ದು ಕಾಫಿ ಸಂಸ್ಕರಣೆಯ ಯಂತ್ರಗಳ ಮಾರಾಟದ ಸಂಸ್ಥೆಯೊಂದರ ಪಾಲುದಾರನಾಗಿದ್ದ. ಕಾಫಿ ಸಂಸ್ಕರಣಾ ಪ್ರಯೋಗಕ್ಕೆ ಬಳಸುತ್ತಿದ್ದ ನೇಟ್ರೋಜನ್ ಟಾಂಕ್ ನಲ್ಲಿ ಆತ್ಮಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.