ಬೆಂಗಳೂರು, ನ.13(Daijiworld News/SS): ಒಂದು ಪಕ್ಷದಿಂದ ಆಯ್ಕೆಯಾದ ಮೇಲೆ ಅವರು ಮನಸೋಯಿಚ್ಛೆ ನಡೆದುಕೊಳ್ಳುವಂತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ನೈತಿಕತೆ ಬಗ್ಗೆಯೂ ವಿಚಾರಣೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಿಂತರೂ ಜನರು ಅನರ್ಹ ಶಾಸಕರನ್ನ ಸೋಲಿಸುತ್ತಾರೆ. ಅದಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರ ಉದಾಹರಣೆ. ಈ ರಾಜ್ಯಗಳಲ್ಲಿ ಪಕ್ಷಾಂತರ ಮಾಡಿದವರು ಬಹುತೇಕ ಸೋತಿದ್ದಾರೆ ಎಂದು ಹೇಳಿದರು.
ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಅನೈತಿಕತೆ ಎನ್ನುವುದು ಸುಪ್ರೀಂ ನಿಲುವಾಗಿದೆ. ಇದು ಅನೈತಿಕವಾದದ್ದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಅಸಂವಿಧಾನಾತ್ಮಕವಾದದ್ದು, ಮತದಾದರ ನಂಬಿಕೆ ದ್ರೋಹ ಮಾಡಿದಂತೆ. ಇದು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವ ಎಂಎಲ್ಎಗಳಿಗೆ ಪಾಠವಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಹೇಳಿದೆ ಎಂದು ತಿಳಿಸಿದರು.
ಅನರ್ಹರು ಉಪಚುನಾವಣೆಗೆ ನಿಲ್ಲಬಹುದು ಎಂದು ಸುಪ್ರೀಂ ಹೇಳಿದೆ ಅದನ್ನು ನಾನು ಸ್ವಾಗತಿಸುತ್ತೇನೆ. ಕೋರ್ಟಿನ ಸಂಪೂರ್ಣ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆದರೆ ಪಕ್ಷಾಂತರ ಮಾಡಿದನ್ನು ಕೋರ್ಟ್ ಒಪ್ಪಿಲ್ಲ. ಬದಲಿಗೆ ಸ್ಪೀಕರ್ ಆದೇಶ ಸರಿಯಂದಿದೆ. ಯಾರೆಲ್ಲಾ ಬೇರೆ ಪಕ್ಷಕ್ಕೆ ಹೋಗಲು ಮುಂದಾಗುತ್ತಾರೋ ಅವರಿಗೂ ಇದು ಪಾಠವಾಗಲಿದೆ ಎಂದು ಹೇಳಿದ್ದಾರೆ.