ಬೆಂಗಳೂರು, ನ 14 (Daijiworld News/MB) : ಅನರ್ಹ ಶಾಸಕರ ರಾಜಿನಾಮೆಯಿಂದಾಗಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಜೆಡಿಎಸ್ 10 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಹೊಸಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಕಣಕ್ಕಿಳಿಯದೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ.
ಹಾಗೆಯೆ ವಿಧಾನಪರಿಷತ್ ನ ಶಿಕ್ಷಕರ ಪದವೀಧರ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ ಕುಮಾರಸ್ವಾಮಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಹಿರೇಕೆರೂರುದಲ್ಲಿ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ, ಶಿವಾಜಿನಗರದಲ್ಲಿ ತನ್ವೀರ್ ಅಹಮ್ಮದ್ ವುಲ್ಲಾ, ಯಶವಂತಪುರದಲ್ಲಿ ಟಿ ಎನ್ ಜವರಾಯಿಗೌಡ, ಯಲ್ಲಾಪುರದಲ್ಲಿ ಚೈತ್ರಾ ಗೌಡ ಎ, ವಿಜಯನಗರದಲ್ಲಿ ಎನ್.ಎಂ ನಬಿ, ರಾಣೆಬೆನ್ನೂರುದಲ್ಲಿ ಮಲ್ಲಕಾರ್ಜುನ ಹಲಗೇರಿ, ಕೆ ಆರ್ ಪೇಟೆಯಲ್ಲಿ ದೇವರಾಜ್ ಬಿ ಎಲ್ , ಚಿಕ್ಕಬಳ್ಳಾಪುರದಲ್ಲಿ ಕೆ.ಪಿ ಬಚ್ಚೇಗೌಡ, ಕೆ ಆರ್ ಪುರಂನಲ್ಲಿ ಸಿ ಕೃಷ್ಣಮೂರ್ತಿ, ಹುಣಸೂರಿನಲ್ಲಿ ಸೋಮಶೇಖರ್ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ.
ವಿಧಾನಪರಿಷತ್ ನ ಶಿಕ್ಷಕರ ಪದವೀಧರ ಕ್ಷೇತ್ರಗಳಾದ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಆರ್ ಚೌಡರೆಡ್ಡಿ ತೂಪಲ್ಲಿ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎ ಪಿ ರಂಗನಾಥ್, ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶಿವಶಂಕರ ಕಲ್ಲೂರ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ತಿಮ್ಮಯ್ಯ ಪುರ್ಲೆ ಕಣಕ್ಕಿಳಿಯಲಿದ್ದಾರೆ.