ಬೆಂಗಳೂರು, ನ 14 (Daijiworld News/MB) : ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ರಾಣೆಬೆನ್ನೂರು(ಆರ್.ಶಂಕರ್) ಹಾಗೂ ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ ಇನ್ನೂ ಘೋಷಿಸಿಲ್ಲ.
ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಕುಮಟಳ್ಳಿಯಲ್ಲಿ ಅಥಣಿ ಮಹೇಶ್, ಕಾಗವಾಡದಲ್ಲಿ ಶ್ರೀಮಂತ ಗೌಡ ಪಾಟೀಲ್, ಮಹಾಲಕ್ಷ್ಮೀ ಲೇಔಟ್ ನಲ್ಲಿ ಕೆ.ಗೋಪಾಲಯ್ಯ, ಕೆಆರ್ ಪುರಂನಲ್ಲಿ ಭೈರತಿ ಬವಸರಾಜ್, ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್, ಹಿರೇಕೆರೂರಿನಲ್ಲಿ ಬಿಸಿ ಪಾಟೀಲ್, ಚಿಕ್ಕಬಳ್ಳಾಪುರಿನಲ್ಲಿ ಡಾ. ಸುಧಾಕರ್, ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ, ಯಶವಂತಪುರದಲ್ಲಿ ಎಸ್ ಟಿ ಸೋಮಶೇಖರ್, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್, ವಿಜಯನಗರದಲ್ಲಿ ಆನಂದ್ ಸಿಂಗ್, ಹುಣಸೂರಿನಲ್ಲಿ ಎಚ್.ವಿಶ್ವನಾಥ್, ಕೆ.ಆರ್ ಪೇಟೆಯಲ್ಲಿ ಕೆ.ಸಿ ನಾರಾಯಣ ಗೌಡ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ.
ಶಿವಾಜಿನಗರದ ರೋಷನ್ ಬೇಗ್ ಕುರಿತು ಬಿಜೆಪಿ ಯಾವುದೇ ನಿರ್ಧಾರವನ್ನು ಬಿಜೆಪಿ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ದೊರೆತಿಲ್ಲ. ಬದಲಾಗಿ ಆ ಕ್ಷೇತ್ರದಲ್ಲಿ ಅನರ್ಹ ಶಾಸಕ ಮಹೇಶ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗಾಗಿ ಲಕ್ಷ್ಮಣ್ ಸವದಿ ಅವರ ಡಿಸಿಎಂ ಸ್ಥಾನಕ್ಕೆ ಕುತ್ತು ಎದುರಾಗಿದೆ.