ಚಿಕ್ಕಬಳ್ಳಾಪುರ, ನ.15(Daijiworld News/SS): ಚುನಾವಣೆ ಯುದ್ಧವಿದ್ಧಂತೆ, ಕಾಂಗ್ರೆಸ್'ನಿಂದ ನೈತಿಕ ಪಾಠ ಕಲಿಯಬೇಕಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕಿದ್ದ ಗ್ರಹಣ ಬಿಟ್ಟಿದೆ. 14 ತಿಂಗಳ ರಾಹು ಕೇತು ತೊಲಗಿದೆ. ಉಪ ಚುನಾವಣೆ ಮೂಲಕ ರಾಜ್ಯದಲ್ಲಿ ಶುಕ್ರದೆಸೆ ಜೊತೆಗೆ ಗುರುಬಲ ಕೂಡಿಬಂದಿದೆ. ಇನ್ನೂ ನಾವು ಕಾಂಗ್ರೆಸ್'ನಿಂದ ನೈತಿಕ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮಾಡೋದು ನೈತಿಕತೆನಾ..? ಮಟ್ಕಾ, ಜೂಜು ರೇಸ್ ಆಡುತ್ತಿದ್ದವರನ್ನ ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದಾರೆ. ಇದು ಯಾವ ನೈತಿಕತೆ..? ಚಿಕ್ಕಬಳ್ಳಾಪುರ ಜನರಿಗೆ ಅಭಿವೃದ್ಧಿ ಬೇಕಾ..? ಇಲ್ಲವೇ ಗೂಂಡಾಗಿರಿ ಜನರಿಗೆ ಬೇಕಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಲಾಗುವುದೆಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, ಕುಮಾರಸ್ಚಾಮಿ ಗೆಲ್ಲುವ ರಾಜಕಾರಣ ಮಾಡಲಿ. ಸೋಲಿನ ರಾಜಕಾರಣ ಬೇಡ. ದೇವೇಗೌಡರು ತಮ್ಮ ಮಗನಿಗೆ ಸರಿಯಾಗಿ ರಾಜಕಾರಣ ಮಾಡುವುದನ್ನು ಕಲಿಸಲಿ ಎಂದು ಹೇಳಿದರು.