ಬೆಂಗಳೂರು, ನ 15(Daijiworld News/MB) : ಸಾಲದ ಭಾದೆಯಿಂದ ನೊಂದ ದಂಪತಿಗಳು ಶೌಚಾಲಯ ಸ್ವಚ್ಛಗೊಳಿಸುವ ಬ್ಲಿಚಿಂಗ್ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮಂಜುನಾಥ ನಗರದಲ್ಲಿ ನವೆಂಬರ್ 14 ರ ಗುರುವಾರ ಮಧ್ಯರಾತ್ರಿ ನಡೆದಿದೆ.
ಮೃತ ದಂಪತಿಗಳಾದ ಮೋಹನ್ (62) ಹಾಗೂ ಅವರ ಪತ್ನಿ ನಿರ್ಮಲಾ (50) ಮಂಜುನಾಥ ನಗರದ ಪುಷ್ಪಾಂಜಲಿ ಚಿತ್ರಮಂದಿರದ ಬಳಿಯ ನಿವಾಸಿಗಳಾಗಿದ್ದು, ಬೆಮೆಲ್ನ ನಿವೃತ್ತ ನೌಕರರಾಗಿದ್ದರು.
ನಿವೃತ್ತಿ ಜೀವನ ನಡೆಸುತ್ತಿದ್ದ ಅವರಿಗೆ ಆರ್ಥಿಕವಾಗಿ ತೊಂದರೆಯಿತ್ತು. ಈ ನೋವಿನಿಂದ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಶೌಚಾಲಯ ಸ್ವಚ್ಚಗೊಳಿಸುವ ಆಸಿಡ್ ಸೇವಿಸಿ, ರಕ್ತ ಖಾರಿಕೊಂಡ ಇಬ್ಬರೂ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಮೋಹನ್ , ಮಂಜುನಾಥ ನಗರದಲ್ಲಿ ಎರಡು ಮನೆ ಕಟ್ಟಿದ್ದರು ಒಂದು ಮನೆಯಲ್ಲಿ ಅವರು ವಾಸವಾಗಿದ್ದು ಇನ್ನೊಂದು ಮನೆಯಲ್ಲಿ ಅವರ ಮಗ ಹಾಗೂ ಸೊಸೆ ನೆಲೆಸಿದ್ದರು.
ಆತ್ಮಹತ್ಯೆ ಮಾಡಿದ ಮರುದಿನ ಬೆಳಿಗ್ಗೆ ಮಗ ಬಾಗಿಲು ಬಡಿದಿದ್ದು, ಯಾರು ಬಾಗಿಲು ತೆರೆಯದ ಕಾರಣ ಬಾಗಿಲು ಒಡೆದು ಒಳ ಬಂದಿದ್ದಾರೆ. ಆದರೆ ಒಳಗೆ ತಂದೆ ತಾಯಿಯ ಮರತ ದೇಹ ನೋಡಿದ ಮಗ ಕೂಡಲೇ ಬಸವೇಶ್ವರ ನಗರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆ ಮಾಡುವ ಮುನ್ನ ಮೋಹನ್ ಡೆತ್ ನೊಟ್ ಬರೆದಿಟ್ಟಿದ್ದಾರೆ. ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವೆಂದು ಸಂಶಯ ವ್ಯಕ್ತವಾಗಿದೆ. ಈ ಡೆತ್ ನೋಟ್ ತಮಿಳು ಭಾಷೆಯಲ್ಲಿದೆ.
ಈ ಕುರಿತು ಬಸವೇಶ್ವರ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.