ಅಯೋಧ್ಯೆ, ನ 14(Daijiworld News/MSP): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ, 51 ಸಾವಿರ ರೂ. ದೇಣಿಗೆ ನೀಡುವುದಾಗಿ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ವಾಸಿಮ್ ರಿಜ್ಮಿ ಅವರು ಘೋಷಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನೀರ್ಮಾಣ ಮಾಡಲು ಸುಪ್ರಿಂ ಕೋರ್ಟ್ ತೀರ್ಪು ನೀಡಿದ ಬಳಿಕ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಈಗ ಈ ಮಂದಿರ ನಿರ್ಮಾಣ ಮಾಡಲು ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷರು ದೇಣಿಗೆ ನೀಡುವುದಾಗಿ ಹೇಳಿದ್ದಾರೆ.
ಸುಪ್ರೀಂ ತೀರ್ಪಿನ ವಿಚಾರವಾಗಿ ಮಾತನಾಡಿರುವ ರಿಜ್ವಿ ಅವರು, " ದಶಕಗಳಷ್ಟು ಹಳೆಯದಾದ ದೇಶವನ್ನು ಕಂಗೆಡುವಂತೆ ಮಾಡಿದ ಸೂಕ್ಷ್ಮ ವಿಚಾರವಾದ ಅಯೋಧ್ಯೆ ಭೂ ವಿವಾದ ಸುಪ್ರೀಂ ಕೋರ್ಟ್ ಸೂಕ್ತ ರೀತಿಯಲ್ಲಿ ತೆರೆ ಎಳೆದು ‘ಅತ್ಯುತ್ತಮ ತೀರ್ಪು’ ನೀಡಿತು ಎಂದು ಪ್ರತಿಕ್ರಿಯಿಸಿದ್ದಾರೆ. ರಾಮ ಜನ್ಮಸ್ಥಾನದಲ್ಲಿ ಭವ್ಯವಾದ ದೇವಾಲಯ ನಿರ್ಮಾಣಕ್ಕೆ"ವಾಸಿಮ್ ರಿಜ್ವಿ ಫಿಲ್ಮ್ಸ್" ಪರವಾಗಿ 51 ಸಾವಿರ ರೂ. ದೇಣಿಗೆ ನೀಡುತ್ತೇವೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ರಾಮಲಲ್ಲಾ ಪರ ತೀರ್ಪು ನೀಡಿದ ಬಳಿಕ ಆಯೋಧ್ಯೆಗೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸತೊಡಗಿದ್ದಾರೆ