ಮಂಗಳೂರು, ನ 14 (Daijiworld News/MSP): 'ಚೌಕಿದಾರ್ ಚೋರ್ ಹೈ' ಎಂಬ ನಮ್ಮ ವಾದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಪುನರುಚ್ಚರಿಸಿದೆ. " ಚೌಕಿದಾರ್ ಚೋರ್ ಹೈ " ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಹೇಳಿಕೆ ಕುರಿತು ರಾಹುಲ್ ಕ್ಷಮೆ ಕೇಳಿದ ಬಳಿಕ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇತ್ಯರ್ಥಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್ 'ಚೌಕಿದಾರ್ ಚೋರ್ ಹೈ' ಎಂಬ ನಮ್ಮ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, " 'ಚೌಕಿದಾರ್ ಚೋರ್ ಹೈ' ಎಂಬ ನಮ್ಮ ವಾದದಲ್ಲಿ ಯಾವುದೇ ಬದಲಾವಣೆ ಇಲ್ಲ, ಸತ್ಯಾಸತ್ಯತೆ ದೇಶದ ಜನರಿಗೆ ತಿಳಿಯಬೇಕು ಎನ್ನುವುದಾದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಫೇಲ್ ಒಪ್ಪಂದದಲ್ಲಿ ಅಕ್ರಮ ಎಸಗಿಲ್ಲ ಎಂದಾದಲ್ಲಿ, ಈ ಕೂಡಲೇ ಕೇಂದ್ರ ಸರ್ಕಾರ ರಫೇಲ್ ಒಪ್ಪಂದವನ್ನ ತನಿಖೆಗೆ ಒಳಪಡಿಸಲಿ. ಇದಕ್ಕಾಗಿ ಜಂಟಿ ಸಂಸದೀಯ ಸಮಿತಿ ರಚಿಸಲಿ. # ಚೌಕಿದಾರ್ ಚೋರ್ ಹೈ" ಎಂದು ಟ್ವೀಟ್ ಮಾಡಿದೆ.
ಗುರುವಾರವಷ್ಟೇ, ರಫೇಲ್ ಯುದ್ಧವಿಮಾನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು" ಚೌಕಿದಾರ್ ಚೋರ್ ಹೈ " ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬ ಕಾಂಗ್ರೆಸ್ನ ಹಿಂದಿನ ಅಧ್ಯಕ್ಷ ರಾಹುಲ್ಗಾಂಧಿ ಅವರ ಹೇಳಿಕೆಯಿಂದ ಗರಂ ಆಗಿದ್ದ ಸರ್ವೋಚ್ಛ ನ್ಯಾಯಾಲಯ ರಾಹುಲ್ ಗಾಂಧಿಯನ್ನು ತರಾಟೆಗೆತ್ತಿಕೊಂಡ ಬಳಿಕ ಅವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥಗೊಳಿಸಿತ್ತು. ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ರಾಜಕೀಯ ಲಾಭಕ್ಕಾಗಿ ಕೋರ್ಟ್ ಆದೇಶವನ್ನು ಬಳಸಿಕೊಳ್ಳಬಾರದು ಎಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್ಕೆ ಕೌಲ್, ನ್ಯಾ. ಕೆ.ಎಂ ಜೋಸೆಫ್ ಅವರಿದ್ದ ಪೀಠ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿತ್ತು.