ಆಂಧ್ರಪ್ರದೇಶ, ನ. 15 (DaijiworldNews/SM): ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಆಂಧ್ರಪ್ರದೇಶದ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಪುರುಷೋತ್ತಮ ಎಂಬ ಬಾಲಕ ಮೃತಪಟ್ಟವನು.
ಮಧ್ಯಾಹ್ನ ಊಟದ ಸಮಯದಲ್ಲಿ ಸಾಲಿನಲ್ಲಿ ಮೊದಲನೆಯವನಾಗಿ ಊಟ ಪಡೆಯಬೇಕೆಂದು ಓಡುತ್ತಿದ್ದ ಪುಟ್ಟಪೋರ ಹಾಲ್ ನಲ್ಲಿ ನೆಲದಮೇಲಿದ್ದ ಬಿಸಿ ಸಾಂಬಾರು ತುಂಬಿದ್ದ ಪಾತ್ರಕ್ಕೆ ಆಯತಪ್ಪಿ ಬಿದ್ದಿದ್ದಾನೆ. ಈ ಸಂದರ್ಭ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರಾರು ಅಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ತಕ್ಷಣ ವಿದ್ಯಾರ್ಥಿಗಳು ಜೋರಾಗಿ ಕಿರುಚಾಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಬಾಲಕನನ್ನು ಸಾಂಬಾರು ಪಾತ್ರೆಯಿಂದ ಹೊರತೆಗೆದಿದ್ದಾರೆ. ಹಾಗೂ ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ದಾರಿ ಮಧ್ಯೆ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಘಟನೆಯಿಂದಾಗಿ ಬಾಲಕನ ಪೋಷಕರು ತೀವ್ರವಾಗಿ ನೊಂದುಕೊಂಡಿದ್ದಾರೆ. ಹಾಗೂ ವಸತಿ ಶಾಲೆಯ ಸಿಬ್ಬಂದಿಗಳ ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಪೊಲೀಸರು ದೂರು ನೀಡಿದ್ದಾರೆ. ಆದರೆ, ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರ ಬೇಜವಾಬ್ದಾರಿಗೆ ಏನು ಅರಿಯದ ಬಾಲಕನೋರ್ವ ಬಲಿಯಾಗಿದ್ದು ವಿಪರ್ಯಾಸ.