ಅಯೋಧ್ಯೆ, ನ. 15 (DaijiworldNews/SM): ಶತಮಾನದಿಂದ ವಿವಾದದ ಸುಳಿಯಲ್ಲಿದ್ದ ಅಯೋಧ್ಯೆ ಇದೀಗ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂನಿಂದ ಮಹತ್ವದ ತೀರ್ಪು ಬಂದಿದ್ದು ದೇಶಕ್ಕೆ ತಿಳಿದಿರಿವ ವಿಚಾರ. ಈ ನಡುವೆ, ಇದೀಗ ವಿವಾದ ಬಗೆಹರಿದ ಬೆನ್ನಲ್ಲೆ ಸೌಹಾರ್ದತೆ ಮೂಡಿದೆ. ಶಿಯಾ ವಕ್ಫ್ ಬೋರ್ಡ್ ನ ಪ್ರಮುಖ ವಾಸಿಂ ರಿಜ್ವಿ ರಾಮ ಮಂದಿರ ನಿರ್ಮಾಣಕ್ಕೆ 51,000 ರೂಪಾಯಿಗಳನ್ನು ನೀಡಿದ್ದಾರೆ.
ಆ ಮೂಲಕ ರಾಮ ಜನ್ಮ ಭೂಮಿಯ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಬದಲಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂಬುವುದನ್ನು ತೋರ್ಪಡಿಸಿದ್ದಾರೆ. ಚೆಕ್ ಹಸ್ತಾಂತರಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾನು ಆಗ್ರಾದಿಂದ ಬಂದಿದ್ದೇನೆ. ಆಗ್ರಾ ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಅಯೋಧ್ಯೆ ಬಹಳ ಪುರಾತನ ಸ್ಥಳವಾಗಿದ್ದು, ಇದು ಕೂಡ ಆಗ್ರಾದಂತೆ ಆಗಲಿದೆ. ಇಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಪ್ರಸಿದ್ದ ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂದು ಅವರು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಟ್ರಸ್ಟ್ ಗೆ ನೀಡುವ ಮೂಲಕ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹಾಗೂ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಿದ್ದು, ಆ ಭಾಗದಲ್ಲಿ ಮಸೀದಿ ನಿರ್ಮಾಣಗೊಳ್ಳಲಿದೆ ಎಂದರು.