ನವದೆಹಲಿ, ನ.16(Daijiworld News/SS): ಆರ್ಥಿಕತೆಯನ್ನು ಸುಧಾರಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೆ, ಕ್ಷಿಪ್ರಗತಿಯಲ್ಲಿ ಆರ್ಥಿಕ ಬೆಳವಣಿಗೆ ಕಷ್ಟಸಾಧ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಿಂದಲೂ ಕುಸಿತದಲ್ಲಿರುವ ಆರ್ಥಿಕತೆಯನ್ನು ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಗಸ್ಟ್ ತಿಂಗಳಿನಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ. ಸೆಪ್ಟೆಂಬರ್’ನಲ್ಲಿ 20 ಬಿಲಿಯನ್ ಮೌಲ್ಯದ ಕಾರ್ಪೋರೇಟ್ ತೆರಿಗೆ ಕಡಿತದ ನಂತರ ಕಂಪನಿಗಳು ಹೊಸ ಹೂಡಿಕೆಗಳನ್ನು ಯೋಚಿಸುತ್ತಿವೆ. ವಾಸ್ತವಿಕವಾಗಿ ಈ ಹೂಡಿಕೆಗಳನ್ನು ಕಾರ್ಯರೂಪಕ್ಕೆ ಬರಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ದೇಶದ ಸಹಕಾರಿ ಬ್ಯಾಂಕ್’ಗಳನ್ನು ರಿಸರ್ವ್ ಬ್ಯಾಂಕ್ ವ್ಯಾಪ್ತಿಯಲ್ಲಿ ತರುವ ಉದ್ದೇಶವಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ತನ್ನ ಹಣಕಾಸಿನ ಕೊರತೆಯ ಸಮಸ್ಯೆಗಳನ್ನು ಬೇಗನೆ ಸುಧಾರಿಸಿಕೊಳ್ಳಲಿದೆ ಅಂತಾ ಹೇಳುವುದಕ್ಕೆ ಆಗಲ್ಲ. ಆದರೆ, ಸರ್ಕಾರದ ಆಸ್ತಿ ಮಾರಾಟ ಕಾರ್ಯಕ್ರಮಗಳಿಂದ ಬಜೆಟ್’ನಲ್ಲಿ ಘೋಷಿಸಲಾಗಿದ್ದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ತೊಂದರೆ ಆಗಲ್ಲ ಎಂದು ತಿಳಿಸಿದ್ದಾರೆ.