ತಿರುವನಂತಪುರ, ನ 16 (Daijiworld News/MSP): ಶಬರಿಮಲೆಯಲ್ಲಿ ಮಂಡಲ ಹಾಗೂ ಮಕರ ಮಹೋತ್ಸವಕ್ಕಾಗಿ ಕ್ಷೇತ್ರದ ಬಾಗಿಲು ಇಂದು (ನ.16ರ ಶನಿವಾರ) ಸಂಜೆ ತೆರಯಲಾಗುವುದು. ಏತನ್ಮಧ್ಯೆ ಸುಪ್ರೀಂ ಕೋರ್ಟ್ ಮರು ಪರಿಶೀಲನೆ ತೀರ್ಪು ಏಳು ಸದಸ್ಯರ ಪೀಠಕ್ಕೆ ನೀಡಿದ ಹಿನ್ನೆಲೆಯಲ್ಲಿ ಶಬರಿಮಲೆಗೆ ಯುವತಿಯರ ಪ್ರವೇಶ ಬೇಡ ಎಂದು ಸರಕಾರ ತೀರ್ಮಾನಕ್ಕೆ ಬಂದಿದೆ. ಕೆಲವು ಮಹಿಳೆಯರು ಪ್ರಚಾರದ ಗೀಳಿಗೆ ದೇಗುಲಕ್ಕೆ ಭೇಟಿ ನೀಡುವುದು ಸಲ್ಲದು, ಆಕ್ಟಿವಿಸ್ಟ್ ಗಳಿಗೆ ಅಕ್ಟಿವಿಸಂ ಪ್ರದರ್ಶಿಸುವ ಸ್ಥಳವಲ್ಲ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಶಬರಿಮಲೆಯಲ್ಲಿದ್ದ ನಿಷೇಧಾಜ್ಞೆ ಈ ಬಾರಿ ಇರುವುದಿಲ್ಲ. ಮರು ಪರಿಶೀಲನೆ ಅರ್ಜಿ ತೀರ್ಪು ವಿಳಂಬವಾಗುವ ಹಿನ್ನೆಲೆಯಲ್ಲಿ ಸರಕಾರ ಕಾನೂನು ಸಲಹೆ ಪಡೆದುಕೊಂಡಿದೆ. ಅಂತಿಮ ತೀರ್ಪು ಬರುವ ತನಕ ಯುವತಿಯರ ಪ್ರವೇಶ ಬೇಡ ಎಂಬ ಸಲಹೆ ಹಿನ್ನೆಲೆಯಲ್ಲಿ ಯುವತಿಯರ ಪ್ರವೇಶಕ್ಕೆ ನಿರ್ಬಂಧ ಹೇರಲು ತೀರ್ಮಾನ ತೆಗೆದುಕೊಂಡಿದೆ.
ಶಬರಿಮಲೆ ಯಾತ್ರೆ ಶನಿವಾರ ಆರಂಭಗೊಳ್ಳುತ್ತಿದ್ದಂತೆ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿಸುಮಾರು 30ರಷ್ಟು ಯುವತಿಯರು ಶಬರಿಮಲೆ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶಬರಿಮಲೆ ತೀರ್ಪು ಏಳು ಸದಸ್ಯರ ಪೀಠಕ್ಕೆ ನೀಡಿದ ಹಿನ್ನೆಲೆಯಲ್ಲಿಗುರುವಾರ ನೀಡಿದ ತೀರ್ಪಿನಲ್ಲಿ ಸ್ಪಷ್ಟತೆಯ ಬಳಿಕವಷ್ಟೇ ಅಂತಿಮ ತೀರ್ಮಾನ ಕೈ ಗೊಳ್ಳಲು ತೀರ್ಮಾನಿಸಿದ್ದು , ಇದರಿಂದ ಪ್ರಸ್ತುತ ಯುವತಿಯರ ಪ್ರವೇಶ ಬೇಡವೆಂದು ಸರಕಾರ ತೀರ್ಮಾನಿಸಿದೆ. ಆದರೆ ಶಬರಿಮಲೆಯಲ್ಲಿ ಭದ್ರತೆ ತೀವ್ರಗೊಳಿಸಲು ತೀರ್ಮಾನಿಸಲಾಗಿದ್ದು ಶಬರಿಮಲೆ ಹಾಗೂ ಪರಿಸರ ಪ್ರದೇಶಗಳಲ್ಲಿ 10,017 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲು ತೀರ್ಮಾನಿಸಲಾಗಿದೆ.