ಚಿಕ್ಕಬಳ್ಳಾಪುರ, ನ 16 (Daijiworld News/MSP): ಬಿಜೆಪಿ ಅಭ್ಯರ್ಥಿ ಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ನಾಮಪತ್ರದಲ್ಲಿ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 215ಕ್ಕೂ ಹೆಚ್ಚು ಕೋಟಿ ರೂ ಎಂದು ಘೋಷಣೆ ಮಾಡಿದ್ದಾರೆ. 2018 ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ನಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 15 ಕೋಟಿ ರೂ. ಎಂದು ಘೋಷಣೆ ಮಾಡಿಕೊಂಡಿದ್ದರು.
ಎಂಟಿಬಿ ಚುನಾವಣೆ ಆಯೋಗಕ್ಕೆ ನೀಡಿರುವ ಆಸ್ತಿಯನ್ನು ಈ ರೀತಿಯಾಗಿ ಉಲ್ಲೇಖಿಸಿದ್ದಾರೆ. ಇದರಲ್ಲಿ 1,12,02,23,637 ರೂ ಬಿಲಿಯನ್ ಎಂಟಿಬಿ ಅವರ ಹೆಸರಿನಲ್ಲಿದ್ದರೆ. 71,89,65,570 ಕೋಟಿ ರೂ ಆಸ್ತಿ ಅವರ ಮಡದಿ ಶಾಂತಕುಮಾರಿ ಹೆಸರಿನಲ್ಲಿದೆ. ಇದಲ್ಲದೆ ಎಂಟಿಬಿ ಬಳಿ 89,04,927ರೂ ನಗದು ಹಣ. ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ ರೂ. ಖಾಯಂ ಠೇವಣಿಯಾಗಿ 166.97 ಕೋಟಿ ರೂ ಇಟ್ಟಿದ್ದಾರೆ. ಎಂಟಿಬಿ ಎಸ್ಟೇಟ್ಸ್ ಅಂಡ್ ಪ್ರಾಪರ್ಟೀಸ್ ಪಾಲುದಾರಿ ಕೆ ಸಂಸ್ಥೆಯಲ್ಲಿ 141 ಕೋಟಿ ಇದೆ. ಎಲ್ಐಸಿ,ಪಿಎನ್ಬಿ ವಿಮೆಗಳು 64,76,009 ಲಕ್ಷ ಮೌಲ್ಯದ್ದಾಗಿದೆ.
ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲದ ರೂಪದಲ್ಲಿ 272 ಕೋಟಿ ನೀಡಿದ್ದಾರೆ. 5,99,78,832 ಕೋಟಿ ಮೌಲ್ಯದ 3 ಐಷಾರಾಮಿ ಕಾರುಗಳಿವೆ. 2,54,13,964 ಬೆಲೆ ಬಾಳುವ 6 ಐಷಾರಾಮಿ ಕಾರುಗಳಿವೆ. ಎಂಟಿಬಿ ಮತ್ತು ಶಾಂತಕುಮಾರಿ ಹೆಸರಿನಲ್ಲಿ 618 ಕೋಟಿ ಸ್ಥಿರಾಸ್ತಿ ಇದ್ದರೆ, 437.15 ಕೋಟಿ ಚರಾಸ್ತಿ ಇದೆ. 3.720 ಕೋಟಿ ಮೌಲ್ಯದ 3606 ಗ್ರಾಂ ಚಿನ್ನ ಇದೆ. ಒಟ್ಟು ಸಾಲ 1,93,84,706. ಪತ್ನಿ 21,60,267. ಕುಟುಂಬದ ಒಟ್ಟು ಆಸ್ತಿ 221,26,16,590 ಇದೆ. ಮೇ.ತ್ರಿಶೂಲ್ ಪವರ್ ಪ್ರೈ.ಲಿ, 4 ಮೆಗಾವ್ಯಾಟ್, ಮೆ.ಶ್ರೀಸಾಯಿದೀಪ್ತಿ ಪವರ್ ಪ್ರೈ.ಲಿ 1.5 ಮೆಗಾವ್ಯಾಟ್, ಮೇ.ಅಪರಿಮಿತ ಪವರ್ ವೆಂಚರ್ಸ್ ಪ್ರೈ.ಲಿ 1 ಮೆಗಾವ್ಯಾಟ್ ಸಂಸ್ಥೆಗಳಲ್ಲಿ ಎಂಟಿಬಿ ಪಾಲುದಾರಿಕೆ ಹೊಂದಿದ್ದಾರೆ.