ನವದೆಹಲಿ, ನ 16 (Daijiworld News/MSP): ಭಾರತೀಯ ನೌಕಾಪಡೆಗೆ ಸೇರಿದ ಮಿಗ್ -29 ಕೆ ವಿಮಾನ ಗೋವಾದಲ್ಲಿ ಪತನಗೊಂಡಿದೆ. ಇದರಲ್ಲಿ ಇದ್ದ ಇಬ್ಬರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ಮುಂಜಾನೆ ಟ್ರೈನಿಂಗ್ ಮಿಷಿನ್ ಗಾಗಿ ವಿಮಾನ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಅಪಘಾತಕ್ಕೀಡಾದ ವಿಮಾನವು ಫೈಟರ್ ಜೆಟ್ನ ತರಬೇತಿ-ಆವೃತ್ತಿಯಾಗಿದೆ.
'ಮಿಗ್-27 ಕೆ ತರಬೇತಿ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ನೌಕಾಪಡೆ ತಿಳಿಸಿದೆ. ಹಕ್ಕಿ ಢಿಕ್ಕಿಯಾಗಿ ಈ ಘಟನೆ ನಡೆದಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ಜೆಟ್ ಮುಕ್ತ ಪ್ರದೇಶದಲ್ಲಿ ಪತನವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳಾದ ಕ್ಯಾಪ್ಟನ್ ಎಂ. ಶಿಯೋಖಂದ್ ಮತ್ತು ಲೆಪ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಅವರನ್ನು ಸುರಕ್ಷಿತವಾಗಿ ಹೊರತರಲಾಗಿದೆ,' ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.