ಮೈಸೂರು, ನ.16(Daijiworld News/SS): ಉಪಚುನಾವಣೆಯಲ್ಲಿ ಬಿಜೆಪಿಯವರು 8 ಸ್ಥಾನಗಳನ್ನೂ ಗೆಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಮುಂದುವರೆಯಲು ಬಿ.ಎಸ್.ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ. ಬಿಜೆಪಿಗೆ ಮುಂದೆ ಸಂಕಷ್ಟ ಕಾದಿದೆ. ಮುಖ್ಯಮಂತ್ರಿಯೇ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ನಿಮ್ಮ ಎಲ್ಲ ಭರವಸೆ ಈಡೇರಿಸುವೆ. ನಿಮ್ಮನ್ನು ಸಚಿವರನ್ನಾಗಿಯೂ ಮಾಡುವೆ. ಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವರನ್ನಾಗಿಸುವೆ ಎಂದು ಹೇಳಿರುವುದು ನೀತಿ ಸಂಹಿತೆಯ ಉಲ್ಲಂಘನೆಯಲ್ವೇನ್ರೀ ಎಂದು ಪ್ರಶ್ನಿಸಿದರು.
ಜೆಡಿಎಸ್'ನ ರಾಜಕೀಯ ಬಗ್ಗೆ ಮಾತನಾಡಿದ ಅವರು, ಅವರಿಗೆ ನಿಲುವೇ ಇಲ್ಲ. ಮೊದಲು ಬಿಜೆಪಿ ಎಂಟು ಗೆಲ್ಲಲಿ. ನಂತರ ನೋಡೋಣ’ ಎಂದು ಸವಾಲು ಹಾಕಿದರು.
ಅನರ್ಹ ಶಾಸಕರ ವಿರುದ್ಧ ಮಾತನಾಡಿದ ಅವರು, ಅನರ್ಹ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅನರ್ಹ ಎಂಬ ಕಳಂಕ ಹೊತ್ತೇ ಇವರು ಮತದಾರರ ಬಳಿ ಹೋಗಬೇಕಿದೆ. ಇವರೆಲ್ಲಾ ಯಾವ ತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಆಸ್ತಿ ಕಳೆದುಕೊಂಡವರಾ..? ಎಂದು ಪ್ರಶ್ನಿಸಿದರು.