ಮುಂಬೈ, ನ 17 (Daijiworld News/MB): ಕೇಂದ್ರ ಸರಕಾರ ಹೊಸ ಒಂದು ವ್ಯವಸ್ತೆ ಜಾರಿಗೆ ತರಲು ಮುಂದಾಗಿದೆ. ದೇಶದ ವೇತನದಾರರ ಹಿತದ ದೃಷ್ಟಿಯಿಂದ 'ಒಂದು ರಾಷ್ಟ್ರ ಒಂದು ವೇತನದ ದಿನ' ಎಂಬ ಹೊಸ ವ್ಯವಸ್ಥೆ ಜಾರಿಗೆ ತರಲಿದೆ.
ಈ ಕುರಿತು ಕೇಂದ್ರ ಸಹಕಾರದ ಖಾಸಗಿ ಭದ್ರತಾ ಉದ್ಯಮ (ಸಿಎಪಿಎಸ್ಐ) ಆಯೋಜಿಸಿದ್ದ ಭದ್ರತಾ ನಾಯಕತ್ವ ಶೃಂಗ – 2019 ರ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ವೇತನ ಸಂಹಿತೆಯನ್ನು ಈಗಾಗಲೇ ಸಂಸತ್ ಅಂಗೀಕರಿಸಿದ್ದು, ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ ಜಾರಿ ಮಾಡಲು ಕೇಂದ್ರ ಸರಕಾರ ನಿರ್ಧಾರ ಮಾಡಿದೆ. ವೇತನ ಸಂಹಿತೆಯ ಅನುಷ್ಠಾನ ಮಾಡಲು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.