ನವದೆಹಲಿ, ನ 18 (DaijiworldNews/SM): ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಸಲುವಾಗಿ ಅಧಿಕಾರ ಹಿಡಿದಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಮ್ಮೆ ಕಪ್ಪು ಹಣದ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ.
ಅಡಗಿಸಿಟ್ಟಿರುವ ಕಪ್ಪುಹಣ ಹೊರಗೆ ತರಲು ಸಾಧ್ಯವಾಗುವಂತೆ ತಮ್ಮ ಅಧಿಕಾರಾವಧಿಯ ಮೊದಲ ಐದು ವರ್ಷಗಳಲ್ಲಿ ಹಲವು ಪ್ರಮುಖ ಕಾನೂನು ಜಾರಿಗೊಳಿಸಿದ್ದರು. ಈಗ ಆಸ್ತಿಗಳಿಗೂ 'ಆಧಾರ್ ಲಿಂಕ್ ಎಂಬ ಮತ್ತೊಂದು ದೈತ್ಯ ಆಯುಧ ಪ್ರಯೋಗಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧೇಯಕವೊಂದನ್ನು ರೂಪಿಸಲು ಮುಂದಾಗಿದೆ. ಇದು ಇದೀಗ ಅಂತಿಮ ಹಂತದಲ್ಲಿದೆ. ಕಪ್ಪು ಹಣ ನಗದು ರೂಪದಲ್ಲಿರದೆ. ಹೂಡಿಕೆಯಾಗಿ ಬದಲಾಗುತ್ತಾ ರಿಯಲ್ಎಸ್ಟೇಟ್ ಕ್ಷೇತ್ರಕ್ಕೆ ಪ್ರವಹಿಸುತ್ತಿದೆ. ದೇಶಾದ್ಯಂತ ಇದೇ ರೀತಿಯ ಪರಿಸ್ಥಿತಿಯಿದ್ದು, ಇದರಿಂದ ನಿವೇಶನ, ಮನೆಗಳ ಬೆಲೆಗಳ ಗಗನಕ್ಕೇರುತ್ತಿವೆ. ಇದರಿಂದ ಬಡವರು, ಮಧ್ಯಮ ವರ್ಗದವವರು ನಿವೇಶನ ಮನೆ ಖರೀದಿಸಲು ಸಾಧ್ಯವಾಗತಂತಹ ಪರಿಸ್ಥಿತಿ ಕಾರಣವಾಗುತ್ತಿದೆ.
ಈ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.