ಮೈಸೂರು, ನ 18 (Dijiworld News/MB): ಯುವಕನೋರ್ವ ಶಾಸಕ ತನ್ವೀರ್ ಸೇಠ್ ಅವರಿಗೆ ಚೂರಿಯಿಂದ ಇರಿದ ಘಟನೆ ನ.17 ರ ಭಾನುವಾರ ತಡರಾತ್ರಿ ನಡೆದಿದೆ.
ಯುವಕನು ತನ್ವೀರ್ ಸೇಠ್ ಅವರ ಕುತ್ತಿಗೆಗೆ ಚೂರಿಯಿಂದ ಇರಿದಿದ್ದು ಅವರಿಗೆ ಗಂಭೀರ ಗಾಯವಾಗಿದೆ.
ತನ್ವೀರ್ ಸೇಠ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ಮಾಡಿದ ವ್ಯಕ್ತಿ ಫರ್ಹಾನ್ ಖಾನ್ (24) ಗೌಸಿಯಾ ನಗರದ ಕೆ.ಎಂ.ಪುರಂ ನಿವಾಸಿ ಎಂದು ತಿಳಿದು ಬಂದಿದೆ.
ಬನ್ನಿ ಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ತನ್ವೀರ್ ಸೇಠ್ ಭಾಗವಹಿಸಿದ್ದು ಈ ಸಂದರ್ಭ ಯುವಕನು ಚೂರಿಯಿಂದ ಇರಿದಿದ್ದಾನೆ.
ಎನ್ ಆರ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.