ನವದೆಹಲಿ, ನ 18 (Dijiworld News/MB): ಭಾರತದ ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೋಬ್ಡೆ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾವಿಧಿ ಭೋಧಿಸಿದ್ದು ಇನ್ನು 18 ತಿಂಗಳ ಕಾಲ ಶರದ್ ಬೋಬ್ಡೆ ಸಿಜೆಐಯಾಗಿ ಕಾರ್ಯನಿರ್ವಹಿಸಿ 2021ರ ಏಪ್ರಿಲ್ 23ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಈ ಹಿಂದಿನ ಮುಖ್ಯನ್ಯಾಯಮೂರ್ತಿಯಾಗಿದ್ದ ರಂಜನ್ ಗೋಗೋಯ್ ಅವರು ಅಕ್ಟೋಬರ್ 18ರಂದು ಶರದ್ ಅರವಿಂದ್ ಬೋಬ್ಡೆ ಅವರನ್ನು ಮುಂದಿನ ನ್ಯಾಯಮೂರ್ತಿಯಾಗಿ ಸೂಚಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ಈಗ ಶರದ್ ಅರವಿಂದ್ ಬೋಬ್ಡೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಯೋಧ್ಯೆ ತೀರ್ಪು ನೀಡಿದ ಪಂಚ ಸದಸ್ಯ ಪೀಠದಲ್ಲಿ ಶರದ್ ಕೂಡಾ ಓರ್ವರಾಗಿದ್ದರು.