ಮೈಸೂರು, ನ 18 (Dijiworld News/MB): ಶಾಸಕ ತನ್ವೀರ್ ಸೇಠ್ ಅವರು ಹಲ್ಲೆಗೊಳಗಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನ್ವೀರ್ ಸೇಠ್ ಅವರಿಗೆ ಯುವಕನೋರ್ವ ಚೂರಿಯಿಂದ ಕತ್ತಿಗೆ ಇರಿದ ಪರಿಣಾಮ ಕತ್ತು ಮತ್ತು ಹೃದಯವನ್ನು ಸಂಪರ್ಕಿಸುವ ಎರಡು ನರಗಳು ತುಂಡಾಗಿವೆ ಎಂದು ವರದಿಯಾಗಿದ್ದು ವೈದ್ಯರು ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ನಡೆಸಿ ನರಗಳನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ವೀರ್ ಸೇಠ್ ಅವರನ್ನು ನೋಡಲು ಹಲವು ಗಣ್ಯರು ಭೇಟಿ ನೀಡಿದ್ದು ವೈದ್ಯರು ಭೇಟಿಗೆ ಅವಕಾಶ ನೀಡಿಲ್ಲ.
ಸಂಸದ ಪ್ರತಾಪಸಿಂಹ ಅವರು 'ಕ್ಷೇತ್ರದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಅವರನ್ನು ಸದೆಬಡಿಯುವಲ್ಲಿ ಕಾರ್ಯ ಪ್ರವೃತ್ತರಾಗಬೇಕು' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಧ್ರುವ ನಾರಾಯಣ ತನ್ವೀರ್ ಸೇಠ್ ಅವರಿಗೆ ಯಾವುದೇ ಜೀವ ಭಯವಿಲ್ಲ. ಇನ್ನು ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ಅಗತ್ಯ ಇದೆ ಎಂದರು.
ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಶಾಸಕ ಯು.ಟಿ. ಖಾದರ್ ಮೊದಲಾದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆರೋಪಿ ಫರಾನ್ ನನ್ನು ಪೊಲೀಸರು ಬಂಧಿಸಿದ್ದು ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.