ನವದೆಹಲಿ, ನ.18(Daijiworld News/SS): ಇಂದಿನಿಂದ ಚಳಿಗಾಲ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್ 13ರವರೆಗೂ ಅಧಿವೇಶನ ನಡೆಯಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಪ್ರತೀ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಸಂಸತ್ತಿನಲ್ಲಿ ಚರ್ಚೆಗಳನ್ನು ಸಮೃದ್ಧಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರತೀ ಸಂಸದರ ಸಹಕಾರದಿಂದ ಸಂಸತ್ತ್ ಅಧಿವೇಶನ ಯಶಸ್ವಿಗೊಳ್ಳಬೇಕು. ಯಶಸ್ವಿ ಅಧಿವೇಶನಕ್ಕೆ ಸಹಕಾರ ನೀಡುತ್ತಿರುವ ಎಲ್ಲಾ ಸಂಸದರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ದೇಶದ ಅಭಿವೃದ್ಧಿಗೆ ಈ ಅಧಿವೇಶನ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
2019ರ ಕಡೆಯ ಅಧಿವೇಶನ ಇದಾಗಿದೆ. ಅಲ್ಲದೆ, ರಾಜ್ಯಸಭೆಯ 250 ಅಧಿವೇಶನ ಕೂಡ ಆಗಿದ್ದು, ಅತ್ಯಂತ ಪ್ರಮುಖವಾಗಿದೆ. ಸಂಸತ್ತಿನಲ್ಲಿ ಪಾರದರ್ಶಕ, ಸ್ಪಷ್ಟ ಚರ್ಚೆಗಳು ನಡೆಯುವ ಅಗತ್ಯವಿದೆ. ಗುಣಮಟ್ಟದ ಚರ್ಚೆಗಳು, ಮಾತುಕತೆಗಳು ನಡೆಯಬೇಕು. ಸಂಸತ್ತಿನ ಚರ್ಚೆಗಳು ಸಮೃದ್ಧಗೊಳಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.