ಮುಂಬೈ, ನ 18 (Dijiworld News/MB): ಅಯೋಧ್ಯೆ ತೀರ್ಪಿನಲ್ಲಿ ದೋಷವಿದೆ ಎಂದು ಬಿಜೆಪಿಯ ಮಾಜಿ ನಾಯಕ ಯಶವಂತ ಸಿನ್ಹಾ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿದ ಅಯೋಧ್ಯೆ ತೀರ್ಪಿನಲ್ಲಿ ದೋಷವಿದೆ. ಆದರೆ ಮುಸ್ಲಿಂ ಸಮುದಾಯ ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ಬೇರೆ ತೀರ್ಪು ಇರುವುದಿಲ್ಲ. ಹೀಗಾಗಿ ಎಲ್ಲರೂ ತೀರ್ಪನ್ನು ಒಪ್ಪಿಕೊಂಡು ಮುಂದೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಪಕ್ಷವು ಕೋಮುವಾದಿ ಪಕ್ಷವೆಂದು ತಿಳಿದಿದ್ದರೂ 1993ರಲ್ಲಿ ನಾನು ಭ್ರಷ್ಟ ಪಕ್ಷಕ್ಕಿಂತ (ಕಾಂಗ್ರೆಸ್) ಉತ್ತಮವೆಂದು ಬಿಜೆಪಿಗೆ ಸೇರುವ ನಿರ್ಧಾರ ಮಾಡಿದ್ದೆ ಎಂದು ತಿಳಿಸಿದ್ದಾರೆ.