ನವದೆಹಲಿ, ನ.19(Daijiworld News/SS): ಉತ್ತುಂಗಕ್ಕೇರಿದ ಭಾವನಾತ್ಮಕ ವಾತಾವರಣದಲ್ಲಿ ಯಾವುದೇ ಕಾನೂನುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಮೇಲ್ಮನೆಯ ಕರ್ತವ್ಯ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ರಾಜ್ಯವನ್ನು ವಿಭಜಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿರುವುದು ದೂರದೃಷ್ಟಿಯ ಹೆಜ್ಜೆಯಾಗಿದ್ದು ಇಂತಹಾ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಚರ್ಚಿಸಬೇಕಿತ್ತು. ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದು ಬಹುದೊಡ್ಡ ಪ್ರಸ್ತಾವನೆ ಮತ್ತು ಮಹತ್ವದ ಕಾನೂನಾಗಿರುತ್ತದೆ ಎಂದು ಹೇಳಿದರು.
ರಾಜ್ಯಗಳ ಪ್ರಾತಿನಿಧಿಕ ಮಂಡಳಿಯಾಗಿರುವ ಈ ರಾಜ್ಯಸಭೆಗೆ ಇಂತಹಾ ನಿರ್ಣಯ ತೆಗೆದುಕೊಳ್ಳುವ ಮುನ್ನ ತಿಳಿಸುವುದು ಮತ್ತು ಇಲ್ಲಿನ ಸದಸ್ಯರಿಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡುವುದು ಅಗತ್ಯವಿದೆ ಎಂದು ಹೇಳಿದ್ದಾರೆ.