ಕೊಲ್ಕತ್ತಾ, ನ 19 (Daijiworld News/MSP): ಆಸ್ಪತ್ರೆ ಸೇರಿದ್ದ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ಅವರು ಸೋಮವಾರ ಸಂಜೆ ಡಿಸ್ಚಾರ್ಜ್ ಆಗಿದ್ದು, ಸಂಸದೆ ಈಗ ಆರೋಗ್ಯವಾಗಿದ್ಧಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಭಾನುವಾರದಂದು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅಪೋಲೊ ಗ್ಲೆನೆಗಲ್ಸ್ ಆಸ್ಪತ್ರೆಯ ಐಸಿಯುನ ದಾಖಲಿಸಲಾಗಿತ್ತು. ಸೋಮವಾರ ಸಂಜೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಈ ನಡುವೆ ನಟಿ, ಸಂಸದೆ ನುಸ್ರತ್ ಜಹಾನ್ ಅವರಿಗೆ ಡ್ರಗ್ ಓವರ್ ಡೋಸ್ ಆಗಿ ಆಸ್ಪತ್ರೆ ದಾಖಲಾಗಿದ್ದರು ಎಂಬ ಸುದ್ದಿ ಹರಡಿತ್ತು. ಆದರೆ ಇದನ್ನು ಅಲ್ಲಗಳೆದಿರುವ ಕುಟುಂಬಿಕರು ನುಸ್ರತ್ ಗೆ ಅಸ್ತಮಾ ಇತ್ತು ಎಂದಿದ್ದಾರೆ.
ಭಾನುವಾರದಂದು, ನುಸ್ರತ್ ಜಹಾನ್ ಪತಿ ನಿಖಿಲ್ ಜೈನ್ ಅವರ ಜನ್ಮದಿನವನ್ನು ಆಚರಿಸಿದ್ದರು. ಅವರ ಸಂಭ್ರಮಾಚರಣೆಯ ಫೋಟೋವನ್ನು ಜಹಾನ್ ಇಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಭಾನುವಾರ ರಾತ್ರಿಯಿಂದ ಜಹಾನ್ ಪತಿ ನಿಖಿಲ್ ಜೈನ್ ಆಸ್ಪತ್ರೆಯಲ್ಲಿದ್ದು ಅವರ ಆರೈಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.