ತಮಿಳುನಾಡು, ನ 19 (Daijiworld News/MSP): ಆರು ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಪ್ಪನೇ ೩ ಅಂತಸ್ತಿನ ಕಟ್ಟಡದ ಮೇಲಿನಿಂದ ಎಸೆದ ಭೀಕರ ಘಟನೆ ವಿಜಯವಾಡದ ವಾಂಬೆ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಬಾಲಕಿ ಜಾನಕಿ ಸ್ಥಿತಿ ಗಂಭೀರವಾಗಿದ್ದು, ಕೋಮಸ್ಥಿತಿಗೆ ಜಾರಿದ್ದು, ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಕೊಂಡರಾಜು ಕೃಷ್ಣ (28 ) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಈತನಿಗೆ 2018 ರಲ್ಲಿ ವಿವಾಹವಾಗಿತ್ತು. ಆದರೆ ವಿಪರೀತ ಮದ್ಯಪಾನ ಮಾಡುವ ಚಟದಿಂದ ಪತ್ನಿ ಈತನನ್ನು ತೊರೆದು ಹೋಗಿದ್ದಳು. ಆ ಬಳಿಕ ತನ್ನ ಸಹೋದರ ಯೇಸುರಾಜು ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಯೇಸುರಾಜು ಶ್ರೀದೇವಿ ಎಂಬಾಕೆಯನ್ನು ವಿವಾಹವಾಗಿದ್ದು ಇವರಿಗೆ ಮೂವರು ಮಕ್ಕಳಿದ್ದರು.
ಭಾನುವಾರ ಸಂಜೆ, ಜಾನಕಿಯ ತಾಯಿ ಶ್ರೀದೇವಿ ಮನೆ ಸ್ವಚ್ಚಗೊಳಿಸುತ್ತಿರುವಾಗ ಪಾನಮತ್ತನಾಗಿದ್ದ ಮನೆ ಪ್ರವೇಶಿಸಿದ್ದ ಕೃಷ್ಣ ಮನೆ ಕೊಳಕುಗೊಳಿಸಿದ್ದ. ಇದನ್ನು ಪ್ರಶ್ನಿಸಿದ ಶ್ರೀದೇವಿಯೊಂದಿಗೆ ಜಗಳವಾಡಿತೊಡಗಿದ್ದ. ಜಗಳ ತಾರಕ್ಕೇರಿದಾಗ ಆರೋಪಿ ಕೃಷ್ಣ ಕೋಪದಿಂದ, ಬಾಲಕಿ ಜಾನಕಿಯನ್ನು ಎತ್ತಿ ಹೊರಕ್ಕೆ ಎಸೆದ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಜಾನಕಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿ ನಂತರ ಗುಂಟೂರು ಜಿಜಿಎಚ್ಗೆ ಕರೆದೊಯ್ಯಲಾಯಿದೆ. ವರದಿಯ ಪ್ರಕಾರ, ಜಾನಕಿ ತಲೆಗೆ ಗಾಯಗಳಾಗಿದ್ದು, ಮೂಗು ಮತ್ತು ಕಿವಿಯಿಂದ ರಕ್ತಸ್ರಾವವಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.