ಹಾವೇರಿ, ನ.19(Daijiworld News/SS): ನಾನು ಸ್ಪೀಕರ್ ಆಗಿದ್ದಾಗ ಅನರ್ಹಗೊಳಿಸಿದ್ದ ನನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನೀವು ಅನರ್ಹರನ್ನು ದೂರವಿಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿದರು.
ಅತೃಪ್ತ ಶಾಸಕರಿಗೂ ಸಂಬಂಧವಿಲ್ಲ ಎನ್ನುತ್ತಿದ್ದ ಯಡಿಯೂರಪ್ಪ ಈಗ ಅದೇ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಅವರುಗಳನ್ನು ಮಂತ್ರಿ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅವರಿಗೂ ಮತ್ತು ಅಭ್ಯರ್ಥಿಗಳಿಗೂ ಜನರೇ ತೀರ್ಪು ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಅವರು ಮತ ಕೇಳುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ನಾನು ಸ್ಪೀಕರ್ ಆಗಿದ್ದಾಗ ಅನರ್ಹಗೊಳಿಸಿದ್ದ ನನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನೀವು ಅನರ್ಹರನ್ನು ದೂರವಿಡಿ ಎಂದು ಹೇಳಿದರು.
ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಒಟ್ಟು 21 ನಾಮಪತ್ರ ಸಲ್ಲಿಕೆಯಾಗಿವೆ.