ಬೆಂಗಳೂರು, ನ 19(Daijiworld News/MB): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಅಯೋಧ್ಯೆ ತೀರ್ಪು ನೀಡಿದ ಪಂಚ ಪೀಠ ಸದಸ್ಯರಲ್ಲಿ ಒಬ್ಬರಾದ ನ್ಯಾ ಎಸ್.ಅಬ್ದುಲ್ ನಜೀರ್ ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ನೀಡುತ್ತಿದೆ ಎಂಬ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅಬ್ದುಲ್ ನಜೀರ್ ಅವರಿಗೆ ‘ಝಡ್’ ಶ್ರೇಣಿ ಭದ್ರತೆ ನೀಡಲು ನಿರ್ಣಯಿಸಿದೆ.
ಗೃಹ ಸಚಿವಾಲಯ ಮೀಸಲು ಪಡೆ ಮತ್ತು ಸ್ಥಳೀಯ ಪೊಲೀಸರಿಗೆ ನ್ಯಾ. ನಜೀರ್ ಮತ್ತು ಕರ್ನಾಟಕದಲ್ಲಿ ಇರುವ ಅವರ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುವಂತೆ ಸೂಚಿಸಿದೆ.
ನಜೀರ್ ಅವರು ಬೆಂಗಳೂರು, ಮಂಗಳೂರು ಹಾಗೂ ಇತರ ಕಡೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟದ ಕೋಟಾದಿಂದ ‘ಝಡ್’ ಶ್ರೇಣಿ ಭದ್ರತೆ ನೀಡಲಾಗುತ್ತದೆ ಮತ್ತು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ನೆಲೆಸಿರುವ ಅವರ ಕುಟುಂಬ ಸದಸ್ಯರಿಗೂ ಭದ್ರತೆ ಒದಗಿದಲಾಗುತ್ತದೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಪಿಎಫ್ಐ "ಬೆದರಿಕೆ ನೀಡಿರುವ ಸುದ್ದಿಯನ್ನು ಸುದ್ದಿ ಸಂಸ್ಥೆಯೊಂದು ಆದಾರ ರಹಿತವಾಗಿ ಮೊದಲು ಪ್ರಕಟಿಸಿದ್ದು ಈ ಕುರಿತು ಕೇಳಿದಾಗ ಅವರಲ್ಲಿ ಯಾವುದೇ ಮಾಹಿತಿ ಇಲ್ಲ. ಇದರಿಂದ ನಮ್ಮ ಸಂಘಟನೆಗೆ ಮಾನಹಾನಿಯಾಗಿದೆ. ಇದು ಖಂಡನಾರ್ಹ" ಎಂದು ಪ್ರಕಟನೆಯಲ್ಲಿ ತಿಳಿಸಿದೆ.