ಮಧ್ಯಪ್ರದೇಶ, ನ 19 (Daijiworld News/MSP): ಕಂಠಪೂರ್ತಿ ಕುಡಿದು, ತಾಯಿ, ತಂಗಿ ಹಾಗೂ ಕಿರಿಯ ಸಹೋದರ ಪತ್ನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ 24 ವರ್ಷದ ಕಾಮುಕ ಮಗನನ್ನು ಪೋಷಕರೇ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಡಾಟಿಯಾ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನ.12 ರಂದು ಯುವಕನೋರ್ವನ ಶವ ಗೋಪಾಲ್ ದಾಸ್ ಬೆಟ್ಟದಲ್ಲಿ ಪತ್ತೆಯಾಗಿತ್ತು. ಇದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು, ಈ ಸಂದರ್ಭ ಕತ್ತು ಹಿಚುಕಿ ಕೊಲೆಯಾದ ವರದಿಯಲ್ಲಿ ಪತ್ತೆಯಾಗಿತ್ತು. ಅನುಮಾನ ಬಂದು ಈ ಕುಟುಂಬವನ್ನು ಪ್ರಶ್ನಿಸಿದಾಗ ಕೊಲೆಯಾದ ವಿಚಾರ ಹೊರಬಿದ್ದಿದೆ ಎಂದು ಡಾಟಿಯಾ ಸಬ್ ಡಿವಿಶನಲ್ ಆಫ್ ಪೊಲೀಸ್ ಗೀತಾ ಭಾರದ್ವಾಜ್ ತಿಳಿಸಿದ್ದಾರೆ.
ಮದ್ಯವ್ಯಸನಿಯಾಗಿದ್ದ ಪುತ್ರ ತಾಯಿ, ತಂಗಿ ಮೇಲೆ ಹಲವಾರು ಅತ್ಯಾಚಾರ ಎಸಗಿದ್ದ. ನವೆಂಬರ್ 11ರಂದು ರಾತ್ರಿ ಪಾನಮತ್ತನಾಗಿ ಬಂದಿದ್ದ ಆತ ತಮ್ಮನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಆತನ ಉಸಿರುಗಟ್ಟಿಸಿ ಸಾಯಿಸಿ ಗೋಪಾಲ್ ದಾಸ್ ಗುಡ್ಡದ ಸಮೀಪ ಎಸೆದಿರುವುದಾಗಿ ತಂದೆ ಪೊಲೀಸರ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದತನ ತಂದೆ, ತಾಯಿ,ತಮ್ಮ ಹಾಗೂ ಆತನ ಪತ್ನಿ ಸೇರಿ ನಾಲ್ವರನ್ನು ಬಂಧಿಸಿದ್ದು, ಸೋಮವಾರ ಕೋರ್ಟ್ ಹಾಜರುಪಡಿಸಿದ್ದು ನ್ಯಾಯಾಲಯ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.