ಬೆಂಗಳೂರು, ನ 19 (DaijiworldNews/SM): ಉಳಿದಿರುವ ಮೂರು ವರ್ಶದ ಅವಧಿಗೆ ನಾನೇ ರಾಝ್ಯದಲ್ಲಿ ಸಿಎಂ ಆಗಿರುತ್ತೇನೆ. ಯಾರಿಂದಲೂ ಆ ಖುರ್ಚಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯದಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದಿದೆ. ಈ ಉಪಸಮರದ ನಂತರ ಸರಕಾರ ಪತನವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ. ಅವರ ಮಾತುಗಳಿಗೆ ತಲೆ ಕೆಡಿಸುವ ಅಗತ್ಯವಿಲ್ಲ ಎಂದು ಸಿಎಂ ಬಿಎಸ್ ವೈ ಪ್ರತಿಕ್ರಿಯೆ ನೀಡಿದ್ದಾರೆ.