ವಯನಾಡು, ನ 20 (Daijiworld News/MB) : ಕೇರಳದ ವಯನಾಡಿನಲ್ಲಿ ಕಾಲೇಜ್ ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದಾಗಿದೆ. ಹೇಗೆ ಗೊತ್ತಾ?
ಬಸ್ ಚಲಿಸುತ್ತಿರುವಾಗಲೇ ಕಾಲೇಜ್ ಹುಡುಗಿಯರಿಗೆ ಬಸ್ ಗೇರ್ ಚೇಂಜ್ ಮಾಡಲು ಬಿಟ್ಟ ಚಾಲಕ 6 ತಿಂಗಳ ಕಾಲ ಲೈಸೆನ್ಸ್ ಕಳೆದು ಕೊಳ್ಳಬೇಕಾಗಿದೆ.
ಕಾಲೇಜು ಹುಡುಗಿಯರು ಗೋವಾ ಟ್ರಿಪ್ಗೆಂದು ಹೋಗಿದ್ದಾಗ ಹುಡುಗಿಯರಿಗೆ ಪದೆ ಪದೆ ಗೇರ್ ಚೇಂಜ್ ಮಾಡಲು ಅವಕಾಶ ನೀಡಿದ ಬಸ್ ಚಾಲಕ ತಾನು ಕೂಡಾ ಅವರ ಕೈ ಹಿಡಿದು ಗೇರ್ ಚೇಂಜ್ ಮಾಡಿದ್ದಾನೆ.
ಆದರೆ ಬರಿ ಇಷ್ಟಕ್ಕೆ ಏನು ಆಗುತ್ತಿರಲಿಲ್ಲ. ಲೈಸೆನ್ಸ್ ರದ್ದಾಗಲು ಕಾರಣವಾದದ್ದೇ ಹುಡುಗಿಯರು ಮಾಡಿದ ವಿಡಿಯೋ. ಈ ಎಲ್ಲಾ ಘಟನೆಯ ವಿಡಿಯೋ ಮಾಡಿದ ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಆರ್ ಟಿ ಒ ಅಧಿಕಾರಿಗಳ ಕೈಗೂ ಸಿಕ್ಕಿದೆ.
ಇದನ್ನು ನೋಡಿದ ಆರ್ ಟಿ ಒ ಅಧಿಕಾರಿಳು ತಕ್ಷಣ ಬಸ್ ಚಾಲಕನನ್ನು ಗುರುತಿಸಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಕಾರಣಕ್ಕೆ ಪ್ರಕರಣ ದಾಖಲು ಮಾಡಿ 6 ತಿಂಗಳ ಕಾಲ ಲೆಸೆನ್ಸ್ ರದ್ದು ಮಾಡಿದ್ದಾರೆ.
ಒಂದು ವಿಡಿಯೋದಿಂದ ಏನೆಲ್ಲಾ ನಡೆಯಬಹುದು ಎನ್ನವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.