ನವದೆಹಲಿ, ನ 20 (Daijiworld News/MSP): ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಶಿವಸೇನೆ ಕಸರತ್ತಿಗೆ ಬಿಗ್ ಶಾಕ್ ನೀಡಲು ಬಿಜೆಪಿ ಸದ್ದಿಲ್ಲದೇ ತನ್ನ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಬಿಜೆಪಿ ಪಕ್ಷವೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ರಾಷ್ಟ್ರಪತಿ ಸ್ಥಾನದ ಆಸೆ ತೋರಿಸಿದ್ದಾರೆ ಹೀಗಾಗಿ ಶಿವಸೇನೆಗೆ ಬೆಂಬಲ ನೀಡುವ ತೀರ್ಮಾನದಿಂದ ಸರಿದಿದ್ದಾರೆ ಎಂಬ ವದಂತಿ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಆದರೆ ಈ ಬಗ್ಗೆ ಬಿಜೆಪಿ ಅಥವಾ ಎನ್ ಸಿಪಿ ಮೂಲಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದೆಡೆ ಬಿಜೆಪಿ ವಿರುದ್ಧ ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ’ದಲ್ಲಿ ಟೀಕೆಗಳ ಸುರಿಮಳೆ ಮುಂದುವರಿಸಿದೆ. ಅಧಿಕಾರ ಹಂಚಿಕೆಯ ಸೂತ್ರದ ಬಳಿಕವೂ ಕಾಂಗ್ರೆಸ್ ಮತ್ತು ಎನ್ ಸಿ ಪಿ ಮೀನಮೇಷ ಎಣಿಸುತ್ತಿರುವುದರಿಂದ ಇದು ಶಿವಸೇನೆಯನ್ನು ಚಿಂತೆಗೀಡುಮಾಡಿದೆ.
ಇನ್ನೊಂದೆಡೆ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2022 ರ ಜುಲೈ 14 ರಂದು ನಿವೃತ್ತರಾಗಲಿದ್ದಾರೆ. ಶರದ್ ಪವರ್ ಅವರ ರಾಜ್ಯಸಭಾ ಸದಸ್ಯತ್ವ 2020 ರ ಏಪ್ರಿಲ್ 2 ರಂದು ಕೊನೆಯಾಗಲಿದೆ. ಹೀಗಾಗಿ ಬಿಜೆಪಿ ಶರದ್ ಪವರ್ ಗೆ ರಾಷ್ಟ್ರಪತಿ ಆಫರ್ ನೀಡಿದೆಯಾ? ಎನ್ನುವ ವದಂತಿ ದಟ್ಟವಾಗಿದೆ.