ಬಾಗಲಕೋಟೆ, ನ 20 (Daijiworld News/MB) : ಬಾದಾಮಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ಮದ್ಯಪಾನ ಮಾಡಿ ಮಹಿಳೆಯರಲ್ಲಿ ಅಸಭ್ಯವಾಗಿ ವರ್ತಿಸಿದ್ದ ಎಂದು ಹೇಳಿ ಆಸ್ಟ್ರೇಲಿಯಾದ ಪ್ರವಾಸಿ ವಿಲಿಯಮ್ಸ್ ಕೆರೆಯನ್ ಜೇಮ್ಸ್ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದರೆನ್ನಲಾದ ಪ್ರಕರಣ ಈಗ ತಿರುವು ಕಂಡಿದ್ದು ಆತ ಕಳ್ಳ ಎಂದು ತಿಳಿದು ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ ಎಂದು ವರದಿಯಾಗಿದೆ.
ನವೆಂಬರ್ 18 ರ ಸೋಮವಾರ ತಡ ರಾತ್ರಿ ಊರಿಗೆ ಬಂದು ಅನುಮಾನಾಸ್ಪದವಾಗಿ ವರ್ತಿಸಿದ್ದ ವಿದೇಶಿ ಕೆರೆಯನ್ ಜೇಮ್ಸ್ ನಿಗೆ ಗ್ರಾಮದ ಜನರು ಹಿಗ್ಗಮುಗ್ಗ ತಳಿಸಿದ್ದರು. ಊರಿನ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಹೇಳಲಾಗಿತ್ತು. ಆದರೆ ಈಗ "ಊರಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದವು. ವಾರಗಟ್ಟಲೇ ರಾತ್ರಿ ತಿರುಗಿದರು ಕಳ್ಳನ ಪತ್ತೆ ಹಚ್ಚಲು ಆಗಿರಲಿಲ್ಲ. ಆದ್ದರಿಂದ ಅನುಮಾನಾಸ್ಪದವಾಗಿ ಕಂಡ ಇವನ ಮೇಲೆ ಕಳ್ಳ ಎಂದು ಭಾವಿಸಿ ಹೊಡೆದಿದ್ದೇವೆ ಎಂದು ಊರಿನ ಜನರು ತಿಳಿಸಿದ್ದಾರೆ" ಎಂದು ವರದಿಯಾಗಿದೆ.
ಆ ಊರಿನಲ್ಲಿ ಆಗಸ್ಟ್ ತಿಂಗಳಲ್ಲಿ 5 ಮನೆಗಳಲ್ಲಿ ಕಳವು ನಡೆದಿದ್ದು, ಸುಮಾರು 5 ತೊಳೆ ಚಿನ್ನಾಭರಣ, 2 ಲಕ್ಷ ನಗದು, 50 ಸಾವಿರ ನಗದು ಮತ್ತು 2 ಆಡು ಕಳವಾಗಿದೆ.
ಬಾಗಲಕೋಟೆಗೆ ಹೋಗಬೇಕಿದ್ದ ವಿಲಿಯಮ್ಸ್ ಕೊಂಕಣಕೊಪ್ಪದಲ್ಲೆ ಇಳಿದು ಊರಿಗೆ ಹೋಗಿ ಮನೆಯೊಂದರ ಮಾಡಿನ ಬಳಿ ಅವಿತು ಕುಳಿತಿದ್ದ. ಇವನಲ್ಲಿ ವಿಚಾರಿಸಲು ಬಂದ ಗ್ರಾಮಸ್ಥರು ಆತ ಓಡಿದಾಗ ಕಳ್ಳ ಎಂದು ಭಾವಿಸಿ ತಳಿಸಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ವಿಲಿಯಮ್ಸ್ ನನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು, ಈ ಕುರಿತು ಪೊಲೀಸರೇ ಗ್ರಾಮಸ್ಥರೆ ಮಾಹಿತಿ ನೀಡಿದ್ದರು.