ಬೆಂಗಳೂರು,ನ20(DaijiworldNews/MB): ಗೆಳೆಯನ ಬರ್ತ್ಡೇ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವಿಸಿ ಬಂದ ಇಬ್ಬರು ಯುವಕರು ಮೃತಪಟ್ಟಿದ್ದು, ಒಂಬತ್ತು ಮಂದಿ ಅಸ್ವಸ್ತರಾದ ಘಟನೆ ನವೆಂಬರ್ 19 ರ ರಾತ್ರಿ ನಗರದ ವಯ್ಯಾಲಿಕಾವಲ್ ನಡೆದಿದೆ.
ಮೃತರಾದ ಅಭಿಲಾಷ್ (23) ಹಾಗೂ ಗೋಪಿ (32) ಸೇರಿದಂತೆ ಒಟ್ಟು ಹನ್ನೊಂದು ಮಂದಿ ಯುವಕರು ಮಲ್ಲೇಶ್ವರಂ ಬಳಿಯ ಕೋದಂಡ ರಾಮಪುರದವಾಗಿದ್ದು ಗೆಳೆಯನ ಬರ್ತ್ಡೇ ಪಾರ್ಟಿಗೆ ಹೋಗಿ ಬಂದವರು ಅಸ್ವಸ್ಥರಾಗಿದ್ದರು.
ಪ್ರಾಥಮಿಕ ಹಂತದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಮೃತಪಟ್ಟ ಕುರಿತು ಶಂಕೆ ವ್ಯಕ್ತವಾಗಿದ್ದು, ಈಗ ಮರಣೋತ್ತರ ಪರೀಕ್ಷೆ ಅವರು ಮಾದಕ ದ್ರವ್ಯ ಸೇವಿಸಿರುವುದು ಖಚಿತವಾಗಿದೆ. ಆದರೆ ಸಾವಿಗೆ ಮಾದಕ ದ್ಯವ್ಯವೇ ಕಾರಣವಲ್ಲ ವಿಷಪೂರಿತ ಆಹಾರದ ಸೇವನೆಯೇ ಕಾರಣವೆಂದು ಹೇಳಲಾಗುತ್ತಿದೆ.
ಈ ಕುರಿತಂತೆ ವಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.