ಬೆಂಗಳೂರು, ನ 20 (DaijiworldNews/SM): ಸಿಲಿಕಾನ್ ಸಿಟಿ ಎಂದು ಕರಸಿಕೊಂಡು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಗುಡ್ ನ್ಯೂಸ್ ನೀಡಲು ಸರಕಾರ ಮುಂದಾಗಿದೆ. ಬೃಹತ್ ಬೆಂಗಳೂರು ನಗರಕ್ಕೆ ಉಚಿತ ವೈಫೈ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.ಮುಂದಿನ ೯ ತಿಂಗಳೊಳಗೆ ಇದು ಜಾರಿಗೆ ಬರಲಿದ್ದು, ದಿನದ ಒಂದು ಗಂಟೆ ಅತ್ಯಂತ ವೇಗದ ಉಚಿತ ವೈಫೈ ಇಂಟರ್ ನೆಟ್ ಸಿಗಲಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅಶ್ವತ್ಥ ನಾರಾಯಣ, ಉಚಿತ ವೈಫೈ ನೀಡುವ ಬಗ್ಗೆ ಮಾತುಕತೆಯಾಗಿದ್ದು, ಇದಕ್ಕಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಫೈ ಹಾಟ್ ಸ್ಪಾಟ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದ 4 ವರ್ಷಗಳಿಂದ ವೈಫೈಗೆ ಬೇಡಿಕೆ ಇದೆ. ಆದರೆ, ಇದೀಗ ಬೇಡಿಕೆ ಈಡೇರುವ ಸಮಯ ಸನಿಹವಾಗಿದ್ದು, ಮುಂದಿನ ಒಂಬತ್ತು ತಿಂಗಳೊಳಗೆ ಇದು ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.