ಔರಂಗಬಾದ್, ನ 21 (Daijiworld News/MB): ಇಲ್ಲಿನ ಸಣ್ಣ ಪ್ರಮಾಣದ ಉದ್ದಿಮೆದಾರ ವಿಷ್ಣು ರಾಂಭುವಾ ಕಲಾವನೆ(53) ರವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿ ಮಾಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿ ಲೋಹಗಳಿಗೆ ಪಾಲಿಷ್ ಮಾಡುವ ಸಣ್ಣ ಘಟಕವನ್ನು ಹೊಂದಿದ್ದು, ಜಿಎಸ್ಟಿಯ ಹಣ ಪಾವತಿ ಮಾಡಲಾಗದ ಕಾರಣ ಸಾವಿಗೆ ಶರಣಾಗುವುದಾಗಿ ಪತ್ರ ಬರೆದಿಟ್ಟು ಆತ್ರಹತ್ಯೆ ಮಾಡಿಕೊಂಡಿದ್ದಾರೆ.