ಕೋಲ್ಕತ್ತಾ, ನ 21 (Daijiworld News/MSP): ಕಟ್ಟಡದ ಆರನೇ ಮಹಡಿಯಿಂದ ಕೆಳಗೆ ಬೀಳುತ್ತಿರುವ 2000 ರೂ, 500 ಮತ್ತು 100 ಮುಖಬೆಲೆಯ ಗರಿಗರಿ ನೋಟುಗಳು.. ಕೆಳಗಿದ್ದವರಿಗೆ ಇದೇನಿದು ನೋಟಿನ ಮಳೆಯೇ ಎಂಬ ಅನುಮಾನ. ಆದರೆ ಅಲ್ಲಿ ನಿಜಕ್ಕೂ ನಡೆದಿದ್ದೇ ಬೇರೆ.
ಕೊಲ್ಕತ್ತಾದ ಬೆಂಟಿಂಕ್ ನಗರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಡಿಆರ್ ಐ ಅಧಿಕಾರಿಗಳು ಕಚೇರಿಗೆ ದಾಳಿ ಮಾಡಿದ ಪರಿಣಾಮ ನೋಟಿನ ಮಳೆಯಾಗಿದೆ. ದಾಳಿಯ ಭಯದಿಂದ ಹಣವನ್ನು ಕಚೇರಿಯಲ್ಲಿದ್ದವರು ಕೆಳಗೆ ಎಸೆದಿದ್ದರು.
ಇಲ್ಲಿನ ಅಮದು ರಪ್ತು ಮಾಡುವ ಹಕ್ ಮರ್ಚಂಟೈಲ್ ಪ್ರೈ.ಲಿ. ಕಚೇರಿಗೆ ಬುಧವಾರ ಡಿಆರ್ ಐ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯ ಒಳಗೆ ಶೋಧ ಕಾರ್ಯ ನಡೆಯುವ ವೇಳೆ ಆರನೇ ಅಂತಸ್ತನಿಂದ ಈ ಹಣದ ಕಂತೆಗಳನ್ನು ಕೆಳಕ್ಕೆ ಎಸೆಯಲಾಗಿದೆ ಎಂದು ವರದಿಯಾಗಿದೆ