ನಿಕೋಬಾರ್, ನ 21 (Daijiworld News/MSP): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದರಿಂಗ್ ಎಂಬ ಹಳ್ಳಿಯಲ್ಲಿ ಕಾರ್ಮಿಕೆಯಾಗಿ ದುಡಿಯುತ್ತಿದ್ದ ತುಂಬು ಗರ್ಭಿಣಿಯನ್ನು ರಕ್ಷಿಸುವ ಸಂದರ್ಭ ಭಾರತೀಯ ನೌಕಾಪಡೆಯ ಇಂಟರ್ಸೆಪ್ಟರ್ ದೋಣಿಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ನಡೆದಿದೆ.
ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು. ಅವರನ್ನು ಕಮೋರಾ ಜೆಟ್ಟಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.
ಮಹಿಳೆಯನ್ನು ರಕ್ಷಿಸಿದ ದೋಣಿ ಐಎನ್ಎಸ್ ಕಾರ್ಡಿಪ್ ನಲ್ಲಿದ್ದ ಫಾಸ್ಟ್ ಇಂಟರ್ಸೆಪ್ಟರ್ ಕ್ರಾಫ್ಟ್ ಆಗಿದ್ದು ಅದು ಕಮೋರ್ಟಾ ದ್ವೀಪದಿಂದ ಹೊರಟಿತ್ತು ಎಂದು ತಿಳಿದುಬಂದಿದೆ