ತೆಲಂಗಾಣ, ನ 21 (Daijiworld News/MB): ಬಿಸಿ ಸಾಂಬಾರು ತುಂಬಿದ್ದ ಪಾತ್ರೆಗೆ ಬಿದ್ದು 3 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಇಲ್ಲಿನ ಸೈಬರಾಬಾದ್ ನಲ್ಲಿ ನಡೆದಿದೆ.
ಈ ಕುರಿತು ಮೃತ ಬಾಲಕನ ತಂದೆ ಸುರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು ,ಸಮಾರಂಭವೊಂದರಲ್ಲಿ ಬಿಸಿ ಸಾಂಬಾರು ತುಂಬಿದ ಪಾತ್ರೆಗೆ ಬಿದ್ದು ಸುಟ್ಟ ಗಾಯಗಳಾಗಿದೆ ಎಂದು ತಿಳಿಸಿದ್ದರು.
ಮಗುವನ್ನು ಆ ಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ಖಾಸಗೀ ಆಸ್ಪತ್ರೆಗ ವರ್ಗಾವಣೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಸುಟ್ಟಗಾಯದಿಂದ ಬಾಲಕ ಮೃತಪಟ್ಟಿದ್ದಾನೆ .
ಈ ಕುರಿತು ಶಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.