ಮೈಸೂರು, ನ 21 (Daijiworld News/MB): ಹೊಸಕೋಟೆ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್ ಕಾಂಗ್ರೆಸ್ ನ ಹಲವು ನಾಯಕರು ನನ್ನಿಂದ ಸಾಲ ಪಡೆದು ಹಿಂದಕ್ಕೆ ನೀಡಿಲ್ಲ ಎಂದು ಹೇಳಿದ ಬೆನ್ನಲ್ಲೇ "ಎಂಟಿಬಿ ನಾಗರಾಜ್ 'ಆಪರೇಶನ್ ಕಮಲ'ಕ್ಕೆ ಸಾಲ ಕೊಟ್ಟಿರುವುದ್ದಾರೆ, ನನಗಲ್ಲ. ಬಿಜೆಪಿಗೆ ಸೇರಿರುವ 17 ಅನರ್ಹ ಶಾಸಕರ ಪೈಕಿ ಇವರೊಬ್ಬರೇ ಹಣ ಕೊಟ್ಟು ಹೋದ ವ್ಯಕ್ತಿ" ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ನಾನು ಯಾರಿಂದಲ್ಲೂ ಸಾಲ ಪಡೆದಿಲ್ಲ. ಕೃಷ್ಣ ಬೈರೇಗೌಡ ಅವರು ಪಡೆದ ಸಾಲ ವಾಪಸ್ ಕೊಟ್ಟಿದ್ದಾರೆ. ಎಲ್ಲಾ ಅನರ್ಹ ಶಾಸಕರು ಬಿಜೆಪಿಯಿಂದ ಹಣ ಪಡೆದು ಹೋದರೆ ಇವರೊಬ್ಬರೇ ಹಣ ಕೊಟ್ಟು ಹೋಗಿದ್ದಾರೆ. ಇವರು ಕೊಟ್ಟ ಸಾಲದಿಂದ ಆಪರೇಷನ್ ಕಮಲ ನಡೆಸಲಾಗಿದೆ ಎಂದು ಅವರು ಎಂಟಿಬಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಅನರ್ಹರಾಗಲೂ ನಾನೇ ಕಾರಣ ಎಂದು ಅವರು ತಿಳಿದಿದ್ದಾರೆ. ಇವರೆಲ್ಲರೂ ಹಣ ಅಧಿಕಾರದ ದುರಾಸೆಯಿಂದ ಬಿಜೆಪಿಗೆ ಹೋಗಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಅನರ್ಹರನ್ನು ಜನ ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದರು.
ಇನ್ನು ಉಪಚುನಾವಣೆಯ ಕುರಿತು ಮಾತಾನಾಡಿದ ಸಿದ್ದರಾಮಯ್ಯನವರು, ಈ ಉಪಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಳಿಸುತ್ತಾರೆ. ಇವರು ಎಷ್ಟೇ ನಯ ವಿನಯದಲ್ಲಿ ಸುಳ್ಳು ಹೇಳಿದರೂ ಜನ ಕೇಳಲ್ಲ. ಪಕ್ಷಾಂತರವನ್ನು ಜನರು ಒಪ್ಪಲ್ಲ. 15 ಕ್ಷೇತ್ರದಲ್ಲೂ ಅನರ್ಹ ಶಾಸಕರು ಸೋಲುತ್ತಾರೆ ಎಂದು ಅವರು ಹೇಳಿದ್ದಾರೆ.