ನವದೆಹಲಿ, ನ 21 (Daijiworld News/MB): ಮಾಜಿ ಏಮ್ಸ್ ವೈದ್ಯೆಯೊಬ್ಬರು ಇಲ್ಲಿನ ಗುರುಗ್ರಾಮದ ಅಪಾರ್ಟ್ ಮೆಂಟ್ ಒಂದರಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ಮೃತಪಟ್ಟ ವೈದ್ಯೆಯನ್ನು ಶೋನಮ್ ಮೋತಿಸ್ ಎಂದು ಗುರುತಿಸಲಾಗಿದ್ದು, ಈ ಕುರಿತು ಆಕೆಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಶೋನಮ್ ಗೆ ಕರೆ ಮಾಡಿದ ಆಕೆಯ ತಂದೆ ಓಂಕಾರ್ ಲಾಲ್ ಆಕೆ ಕರೆ ಸ್ವೀಕರಿಸದ ಕಾರಣ ಅಪಾರ್ಟ್ ಮೆಂಟ್ ಗೆ ಹುಡುಕಿ ಬಂದಿದ್ದು, ಮಗಳ ಮೃತ ದೇಹವನ್ನು ನೋಡಿದ್ದಾರೆ.
ಈ ಕುರಿತು ಮಾತಾನಾಡಿದ ತಂದೆ ಓಂಕಾರ್ ಲಾಲ್, ತನ್ನ ಅಳಿಯ ಶಿಖರ್ ಮೋರ್ ಮಾದಕ ವ್ಯವಸಿಯಾಗಿದ್ದು, ಪತ್ನಿ ಶೋನಮ್ ಗೂ ಮಾದಕ ದ್ರವ್ಯ ಸೇವನೆ ಮಾಡಲು ಒತ್ತಾಯಿಸುತ್ತಿದ್ದ. ಅಷ್ಟು ಮಾತ್ರವಲ್ಲದೇ ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳವಾಗುತ್ತಿತ್ತು.ಒಮ್ಮೆ ಜಗಳದಲ್ಲಿ ಶಿಖರ್ ಪತ್ನಿಯ ಕಾಲು ಮುರಿದಿದ್ದು ಆತ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.