ಹುಬ್ಬಳ್ಳಿ, ನ.21(Daijiworld News/SS): ಪ್ರಜಾಪ್ರಭುತ್ವದಲ್ಲಿ ಏನೇನ್ ಆಗಬಾರದೋ ಅವೆಲ್ಲ ಆಗಿದೆ. ಅದರ ಬಗ್ಗೆ ಮಾತನಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅಧಿಕಾರದಲ್ಲಿದ್ದಾರೆ. ಆದರೆ ಮಹದಾಯಿ ಬಗ್ಗೆ ಹೋರಾಟ ಮಾಡುತ್ತಿಲ್ಲ. ಹೆದರಿಕೊಂಡು ಬಾಯಿ ಬಿಡುತ್ತಿಲ್ಲ. ಅವರೆಲ್ಲ ಸಚಿವ ಸ್ಥಾನದಲ್ಲಿ ಇರಲು ಲಾಯಕ್ಕಿಲ್ಲ. ನ್ಯಾಯಾಲಯದ ತೀರ್ಪು ಇದ್ದರೂ ಒಂದು ಗೆಜೆಟ್ ನೋಟಿಫಿಕೇಷನ್ ಮಾಡಬೇಕಿತ್ತು. ಬಿಜೆಪಿಯವರು ಎಲ್ಲರಿಗೂ ಡಿಸಿಎಂ ಮಾಡ್ತಿನಿ ಮಂತ್ರಿ ಮಾಡ್ತಿನಿ ಅಂತಾರೆ. ಇದೊಂದು ಸಣ್ಣ ಕೆಲಸ ಮಾಡೋಕ್ಕಾಗಲ್ವಾ..? ಎಂದು ಪ್ರಶ್ನಿಸಿದರು.
ಮಂತ್ರಿ ಮಾಡ್ತೀನಿ ಎಂದು ಆಸೆ ತೋರಿಸುವುದೂ ಭ್ರಷ್ಟಾಚಾರ ಅಲ್ವಾ..? ಎಂದು ಸಿಎಂ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದರು.
ಜೈಲಿನಿಂದ ಬಿಡುಗಡೆಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಸೇಬು ಹಣ್ಣಿನ ಮಾಲೆ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.