ನವದೆಹಲಿ, ನ 21 (DaijiworldNews/SM): ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ತಿಹಾರ್ ಜೈಲಿನಲ್ಲೇ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಸೂಚಿಸಿದೆ.
ತಿಹಾರ ಜೈಲಿನಲ್ಲೇ ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಕೋರ್ಟ್ ಗುರುವಾರ ಅನುಮತಿ ನೀಡಿದೆ. ಪಿ ಚಿದಂಬರಂ ಅವರನ್ನು ಜೈಲಿನಲ್ಲಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಳ್ಳಲು ಅನುಮತಿ ನೀಡುವಂತೆ ಇಡಿ ಮನವಿ ಸಲ್ಲಿಸಿತ್ತು. ಇದೀಗ ವಿಚಾರಣೆಯ ಬಳಿಕ ನವಂಬರ್ ೨೨ ಮತ್ತು ೨೩ರಂದು ಚಿದಂಬರಂ ಅವರನ್ನು ತಿಹಾರ ಜೈಲಿನಲ್ಲೇ ವಿಚಾರಣೆ ನಡೆಸಲು ಹೈಕೋರ್ಟ್ ಇಡಿಗೆ ಅನುಮತಿ ನೀಡಿದೆ.
ಇನ್ನು ಈ ನಡುವೆ ನವಂಬರ್ 27ರ ತನಕ ಚಿದಂಬರಂ ಅವರ ನ್ಯಾಯಾಂಗ ಅವಧಿ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.ಇದೇ ಪ್ರಕರಣದಲ್ಲಿ ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.