ಚಿಕ್ಕಮಗಳೂರು, ನ 22 (Daijiworld News/MSP): ಪ್ರೀತಿಸಿದ ಹುಡುಗಿ ಮದುವೆಯಾಗಲು ನಿರಾಕರಿಸಿದ ಕಾರಣ ಮನನೊಂದ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಿರೇಬೈಲ್ ನಲ್ಲಿ ನಡೆದಿದೆ.
ಸಬರಗಟ್ಟೆ ನಿವಾಸಿಯಾಗಿರುವ ಸತೀಶ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಹಿರೇಬೈಲ್ ನಲ್ಲಿರುವ ಸಂಬಂಧಿಕರ ಮನೆಯ ಪಕ್ಕದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರುಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಪ್ರೇಯಸಿಯನ್ನು ನರ್ಸಿಂಗ್ ಓದಿಸಿದ್ದ. ನರ್ಸಿಂಗ್ ಮುಗಿಸಿದ್ದ ಪ್ರೇಯಸಿ ಟ್ರೈನಿಂಗ್ ಗಾಗಿ ಸೇರಿಕೊಂಡಿದ್ದಳು. ಈ ಸಂದರ್ಭ ಆಕೆ ಸತೀಶ್ ನ ಕರೆಗಳನ್ನು ನಿರ್ಲಕ್ಷಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ತನ್ನ ಪ್ರೇಯಸಿಯ ಫೋಟೋವನ್ನು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ, ಡೆತ್ ನೋಟ್ ಸ್ನೇಹಿತರಿಗೆ ರವಾನಿಸಿ , ನನ್ನ ಸಾವಿಗೆ ಈಕೆಯೇ ಕಾರಣ ಎಂದು ಬರೆದುಕೊಂಡು, ಪ್ರೇಯಸಿಯ ಊರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.