ಅಮರಾವತಿ, ನ 23 (Daijiworld News/MB) : ರಾಜ್ಯದಲ್ಲಿರುವ ಎಲ್ಲಾ ಮದ್ಯದಂಗಡಿಗಳ ಪರವಾನಗಿಯನ್ನು ನವೆಂಬರ್ ೨೨ ರ ಶುಕ್ರವಾರ ರದ್ದುಪಡಿಸಿವುದರ ಮೂಲಕ ಮದ್ಯಪ್ರಿಯರಿಗೆ ಆಂಧ್ರಪ್ರದೇಶ ಸರ್ಕಾರ ಶಾಕ್ ನೀಡಿದೆ. ಸರಕಾರವು ಮುಂದಿನ ಎರಡು ವರುಷಗಳಿಗೆ ಅನುಗುಣವಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಮದ್ಯಪಾನದಿಂದ ಆಗುವ ಅವಘಡಗಳನ್ನು ನಿಯಂತ್ರಣಕ್ಕೆ ತರುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈಗಾಗಲೇ ಯೋಜನೆಯ ಶೇ 40 ರಷ್ಟು ಜಾರಿಗೆ ಮಾಡಲಾಗಿದೆ.
ಈ ಹೊಸ ಬಾರ್ ನೀತಿಯನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸಿಪಿ ಸರ್ಕಾರ ಜಾರಿಗೊಳಿಸಿದ್ದು 2020ರ ಜನವರಿಯಿಂದ ಜಾರಿಗೆ ಬಂದು ಎರಡು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ.
ಈ ಹೊಸ ನೀತಿಯಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸಿ ರಸ್ತೆ ಅಪಘಾತಗಳು ಸಂಭವಿಸುವುದು, ಕೌಟುಂಬಿಕ ಹಿಂಸಾಚಾರ ಮಾಡುವುದು, ಅಪರಾಧ ಮತ್ತು ಇತರ ಸಾಮಾಜಿಕ ದುಷ್ಕೃತ್ಯಗಳು ಕಡೆಮೆಯಾಗಿ ಬಡ ವರ್ಗಗಳನ್ನು ಆರ್ಥಿಕವಾಗಿ ಉನತ್ತಿ ಸಾಧಿಸಲು ದಾರಿಯಾಗುತ್ತದೆ ಎಂಬ ಅಭಿಪ್ರಾಯವಿದೆ.
ಹೊಸ ನೀತಿಯ ಅನ್ವಯ ಬಾರ್ ಪರವಾನಗಿ ಅರ್ಜಿ ಶುಲ್ಕವನ್ನು 10 ಲಕ್ಷ ರೂ ಎಂದು ನಿಗದಿಪಡಿಸಲಾಗಿದೆ. ಪರವಾನಗಿಯನ್ನು ಎರಡು ವರ್ಷಗಳವರೆಗೂ ಲಾಟರಿ ಮುಖೇನ ಆಯ್ಕೆ ಮಾಡಲಾಗುವುದು ಮತ್ತು ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸುವುದಿಲ್ಲ. ಇಷ್ಟು ಮಾತ್ರವಲ್ಲದೇ ಪರವಾನಗಿ ಪಡೆಯಬೇಕಾದಲ್ಲಿ 50,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 25 ಲಕ್ಷ ರೂಪಾಯಿ, 5 ಲಕ್ಷದವರೆಗಿನ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 50 ಲಕ್ಷ ರೂಪಾಯಿ, 75,00,000 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 75 ಲಕ್ಷ ರೂಪಾಯಿ ಪಾವತಿ ಮಾಡಬೇಕು. ಹಾಗೆಯೇ ಜನವರಿ 1, 2020 ರಿಂದ ರಾಜ್ಯದ ಬಾರ್ಗಳು ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ಮಾತ್ರ ತೆರೆದಿರುತ್ತದೆ.
ಪ್ರಸ್ತುತ, ಆಂಧ್ರಪ್ರದೇಶದಲ್ಲಿ 3,500 ಮದ್ಯದಂಗಡಿಗಳಿದ್ದು ಬಾರ್ಗಳ ಸಂಖ್ಯೆಯನ್ನು ಶೇಕಡಾ 40 ರಷ್ಟು ಇಳಿಸುವುದಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ ಮಾಡಿದ್ದರು. ಹಾಗೆಯೇ ಮದ್ಯದ ಬೆಲೆಯನ್ನು ಏರಿಕೆ ಮಾಡುವುದರ ಮೂಲಕ ಮದ್ಯ ಸೇವನೆ ಮಾಡುವ ಉತ್ಸಾಹವನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದ್ದರು.
ಆಂಧ್ರಪ್ರದೇಶ ಸರಕಾರ ಹೊರಡಿಸಿದ ಈ ಆದೇಶದಲ್ಲಿ, ಪರವಾನಗಿ ಶುಲ್ಕವನ್ನು ಹೆಚ್ಚಿಸುವುದು, ಬಾರ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಮತ್ತು ಹೊಸ ನೀತಿಯಡಿಯಲ್ಲಿ ಬಾರ್ಗಳ ವ್ಯವಹಾರ ಸಮಯವನ್ನು ಕಡಿಮೆ ಮಾಡುವುದು, ಸಾಮಾನ್ಯ ಜನರಿಗೆ ಮದ್ಯಗಳ ಲಭ್ಯತೆಯನ್ನು ಮತ್ತಷ್ಟು ಕಡಿತಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ.