ಬೆಂಗಳೂರು, ನ 23 (Daijiworld News/MB) : 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ೩೮೩ ಹುದ್ದೆಗಳ ನೇಮಕಾತಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಿರ್ಧಾರಿಸುವ ರಾಜ್ಯ ಸರಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ 2006 ರ ಜೂನ್ 21ರಂದು ಹೈಕೋರ್ಟ್ ನೀಡಿದ್ದ ತೀರ್ಪಿನಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಸಿಎಲ್) ಪರಿಷ್ಕರಿಸಿರುವ ಆಯ್ಕೆ ಪಟ್ಟಿಯನ್ನು ಜಾರಿಗೊಳಿಸಲು ತಿರ್ಮಾನ ಮಾಡಿದೆ.
ರಾಜ್ಯ ಪತ್ರದಲ್ಲಿ 2019 ರ ಆಗಸ್ಟ್ 22ರಂದು ಪ್ರಕಟಿಸಿದ , ಹೊಸ ಪರಿಷ್ಕೃತ ಆಯ್ಕೆ ಪಟ್ಟಿ ಜಾರಿಯಿಂದಾಗಿ 11 ಐಎಎಸ್ ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದು 36 ಗೆಜೆಟ್ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಹಾಗೆಯೇ ೧೧೫ ಅಧಿಕಾರಿಗಳ ಹುದ್ದೆಗಳು ಬದಲಾವಣೆಯಾಗಲಿದೆ.
ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಈ ಕುರಿತು ಪತ್ರ ಬರೆದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ "ಹೈಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸದೆ ಇದ್ದರೆ ಸರಕಾರವು ನ್ಯಾಯಾಂಗ ನಿಂದನೆಗೆ ಗುರಿಯಾಗುತ್ತದೆ. ಆದ್ದರಿಂದ ಪರಿಷ್ಕೃತ ಪಟ್ಟಿ ಜಾರಿಗೊಳಿಸಲು ಕ್ರಮವಹಿಸುವಂತೆ ತಿಳಿಸಿದ್ದರು.
ನ್ಯಾಯಲಯದ ಆದೇಶವನ್ನು ಜಾರಿಮಾಡದಿದ್ದಲ್ಲಿ ಪ್ರಕರಣ ಇತ್ಯರ್ಥವಾಗದೆ ಉಳಿಯುತ್ತದೆ. ಹಾಗೆಯೇ ಸರಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗುತ್ತದೆ. ಸುಗ್ರೀವಾಜ್ಞೆಯನ್ನು ಜಾರಿಮಾಡಿದರೆ ನ್ಯಾಯಲಯದಲ್ಲಿ ಪುನಹ ಪ್ರಶ್ನಿಸಬಹುದು ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ಹಿಂದಿನ 2 ಸರಕಾರಗಳು ಹಿಂಬಡ್ತಿ ಎದುರಿಸುತ್ತಿರುವ ಐಎಎಸ್ ಅಧಿಕಾರಿಗಳ ರಕ್ಷಣೆಗೆ ಮುಂದಾಗಿ ಎರಡು ಬಾರಿ ಸುಗ್ರೀವಾಜ್ಞೆ ತರಲು ಮಂದಾಗಿದ್ದು, ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಣೆ ಮಾಡಿ ಹಿನ್ನಲೆಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತರಲು ಈ ಆ 2 ಸರಕಾರಗಳಿಗೂ ಸಾಧ್ಯವಾಗಲಿಲ್ಲ.
ಹೈಕೋರ್ಟ್ ಈ ಸಂಬಂಧ ನೀಡಿದ್ದ ತೀರ್ಪು ಜಾರಿಯಾಗದೆ ಉಳಿದಿದ್ದ ಹಿನ್ನಲೆಯಲ್ಲಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣಾ ಹಂತದಲ್ಲಿದ್ದು, ನವೆಂಬರ್ 14ರಂದು ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಪಾಲನೆಗೆ ನಾಲ್ಕು ವಾರಗಳ ಗಡುವನ್ನು ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಇಲಾಖೆ, ಆರ್ಥಿಕ ಇಲಾಖೆ ಮತ್ತು ಅಡ್ವೊಕೇಟ್ ಜನರಲ್ ನ್ಯಾಯಾಲಯದ ತೀರ್ಪು ಪಾಲಿಸುವಂತೆ ಸಲಹೆ ನೀಡಿತ್ತು.
ಎಚ್. ಬಸವರಾಜೇಂದ್ರ, ಶಿವಾನಂದ ಕಾಪಸಿ, ಕವಿತಾ ಮಣ್ಣಿಕೇರಿ, ಜಿ.ಸಿ. ವೃಷಭೇಂದ್ರ ಮೂರ್ತಿ, ಎಚ್.ಎನ್.ಗೋಪಾಲಕೃಷ್ಣ, ಮೀನಾ ನಾಗರಾಜ, ಅಕ್ರಂ ಪಾಷ, ಕರಿಗೌಡ, ಆರ್.ಎಸ್.ಪೆದ್ದಪ್ಪಯ್ಯ, ಪಿ ವಸಂತಕುಮಾರ್, ಎನ್ ಶಿವಶಂಕರ್ ಹಿಂಬಡ್ತಿ ಪಡೆವರಾಗಿದ್ದಾರೆ.