ಅಹಮದಾಬಾದ್, ನ 23 (Daijiworld News/MB) : ಅಕ್ರಮ ಬಂಧನದಲ್ಲಿಟ್ಟ ಆರೋಪಿಯಾದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರು ಭೂಗತವಾಗಿದ್ದು ಬಾಲಕಿಯರ ಕಿಡ್ನಾಪ್ ಪ್ರಕರಣದ ಕುರಿತು ತನ್ನ ಹೇಳಿಕೆಯನ್ನು ವಿಡಿಯೋ ಮುಖೇನ ನೀಡಿದ್ದಾರೆ. "ಈ ಕೃತ್ಯ ಒಂದು ವ್ಯವಸ್ಥಿತ ಸಂಚು. ನನ್ನನ್ನು ಸಂಘದಿಂದ ದೂರ ಮಾಡುವ ಉದ್ದೇಶದಿಂದ ಯಾರೋ ಮಾಡಿದ ಕುತಂತ್ರ" ಎಂದು ಹೇಳಿದ್ದಾರೆ.
"ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದ ವಿಡಿಯೋದಲ್ಲಿ ಎಲ್ಲಾ ಮಕ್ಕಳು ಒಂದೇ ಹೇಳಿಕೆಯನ್ನು ನೀಡಿದ್ದಾರೆ. ಎಲ್ಲಾ ಮಕ್ಕಳು ಸುಳ್ಳು ಹೇಳಲು ಸಾಧ್ಯವಿಲ್ಲ. ಇದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿ ನಾವು ಅಂದರೆ ಯೋಗಿನಿ ಸರ್ವಜ್ಞಾನಪೀಠಂ ನ್ಯಾಯ ಪಡೆಯುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.
"ಎಲ್ಲಾ ಕುತಂತ್ರಗಳು ಸಾಬೀತಾಗುತ್ತಿದೆ. ನಮ್ಮದು ಮುಕ್ತವಾದ ಸಂಸ್ಥೆ ಹಾಗಾಗೀ ಕೆಲವು ತಂಡಗಳು ಸಂಸ್ಥೆಯ ಒಳಗೆ ಬಂದು ಅಪರಾಧ ಕೃತ್ಯಗಳನ್ನು ನಡೆಸುತ್ತಿದೆ. ಸಾಕ್ಷಿಗಳನ್ನು ಸೃಷ್ಟಿಸಿ ಆ ಅಪರಾಧ ಕೃತ್ಯ ನನ್ನಿಂದ ಅಥವಾ ನನ್ನ ಸೂಚನೆಯ ಮೇರೆಗೆ ಮಾಡಲಾಗುತ್ತಿದೆ ಎಂದು ಹೇಳಿ ಸಂಘಕ್ಕೆ ನನ್ನ ಮೇಲೆ ಇರುವ ವಿಶ್ವಾಸವನ್ನು ಮುರಿಯಲು ಪ್ರಯತ್ನ ಮಾಡುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಬಗ್ಗೆ ಸುಳ್ಳು ಮಾಹಿತಿಗಳನ್ನು ಹಬ್ಬಿಸಲಾಗುತ್ತಿದೆ. ಸುಳ್ಳು ಸುದ್ದಿ ಹಬ್ಬಿಸಿ , ಸಂಘದ ಆಡಳಿತ ಮಂಡಳಿಯವರನ್ನು ಬಂಧಿಸಿ ಅವರು ಮಾಡದ ಅಪರಾಧವನ್ನು ಅವರು ಮಾಡಿದ್ದಾಗಿ ಹೇಳಿಕೆ ನೀಡುವಂತೆ ಹಿಂಸೆ ನೀಡಲಾಗುತ್ತಿದೆ. ಮೊದಲಾಗಿ ಅಪರಾಧ ನಡೆದಿಲ್ಲ. ನಾನು ಯಾವುದೇ ಅಪರಾಧ ಕೃತ್ಯ ನಡೆಸಲು ತಿಳಿಸಿಲ್ಲ " ಎಂದು ನಿತ್ಯಾನಂದ ಅವರು ತಿಳಿಸಿದ್ದಾರೆ.
ಆಶ್ರಮದಲ್ಲಿದ್ದ ಮಕ್ಕಳು ನಮ್ಮ ಮೇಲೆ ಹಿಂಸಾಚಾರ ಮಾಡಲಾಗಿದೆ. ಬಂಧನದಲ್ಲಿ ಇರಿಸಲಾಗಿದೆ. ನಾವು ಅಲ್ಲಿಂದ ತಪ್ಪಿಸಿದಲ್ಲಿ ಕೊಲ್ಲುವಾಗಿ ಬೆದರಿಕೆ ನೀಡಲಾಗಿದೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ನಿತ್ಯಾನಂದ ಅವರ ಇಬ್ಬರು ಹಿಂಬಾಲಕರಾದ ಹರಿಣಿ ಚೆಲಪ್ಪನ್ ಅಲಿಯಾಸ್ ಮಾ ನಿತ್ಯಾ ಪ್ರನ್ಪ್ರಿಯಾ ನಂದಾ (30) ಮತ್ತು ರಿದ್ಧಿ ರವಿಕಿರಣ್ ಅಲಿಯಾಸ್ ಮಾ ನಿತ್ಯ ಪ್ರಿಯತತ್ವ ನಂದ (24) ಅವರನ್ನು ಈಗಾಗಲೇ ಬಂಧಿಸಲಾಗಿದೆ.