ಮುಂಬೈ, ನ 24(Daijiworld News/MB) : ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯ ಬಳಿಕ ಕಾಣೆಯಾದ ಶಹಪುರ ಎನ್ ಸಿಪಿ ಶಾಸಕ ದೌಲತ್ ದರೊಡ ಅವರ ವಿರುದ್ಧ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ ಹಿನ್ನಲೆಯಲ್ಲಿ ದೂರು ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ನವೆಂಬರ್ 23 ರಂದು ಬೆಳಿಗ್ಗೆ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಅಲ್ಲಿ ಇದ್ದ ಶಹಪುರ ಎನ್ ಸಿಪಿ ಶಾಸಕ ದೌಲತ್ ದರೊಡ ನಂತರ ಕಾಣೆಯಾಗಿದ್ದಾರೆ. ಈ ಕುರಿತು ಮಾಜಿ ಶಾಸಕ ಪಾಂಡುರಂಗ ಬರೊರ ಶಹಪುರ ಪೊಲೀಸ್ ಠಾಣೆಯಲ್ಲಿ ದರೊಡ ಅವರು ಕಾಣೆಯಾಗಿದ್ದಾರೆ ಎಂದು ಕೇಸು ದಾಖಲಿಸಿದ್ದಾರೆ.
ನವೆಂಬರ್ 22 ರ ಶುಕ್ರವಾರ ರಾತ್ರಿ ದರೊಡ ತಮ್ಮ ಕ್ಷೇತ್ರದ ಪಕ್ಕದ ಥಾಣೆಯಿಂದ ತಮ್ಮ ಪುತ್ರ ಕರಣ್ ನೊಂದಿಗೆ ಮುಂಬೈಗೆ ಬಂದಿದ್ದು ನಂತರ ಅವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ನವೆಂಬರ್ 23 ರಂದು ಮಾಧ್ಯಮದವರಲ್ಲಿ ಮಾತಾನಾಡಿದ ದೌಲತ್ ದರೊಡ ಅವರ ಪುತ್ರ ಕರಣ್ " ನಮ್ಮ ತಂದೆ ಎಲ್ಲಿ ಹೋಗಿದ್ದಾರೆ ಎಂದು ನಮಗೆ ತಿಳಿದಿಲ್ಲ. ನಿನ್ನೆ ಬೆಳಿಗ್ಗೆಯಿಂದ ನಮ್ಮ ಸಂಪರ್ಕಕ್ಕೂ ಸಿಗುತಿಲ್ಲ. ಅವರು ಶರತ್ ಪವಾರ್ ಜೊತೆ ಇರಬೇಕು ಎಂಬುದು ನಮ್ಮ ಆಸೆ ಎಂದು ಹೇಳಿದ್ದಾರೆ.