ಅಹಮದಾಬಾದ್ , ನ 24(Daijiworld News/MB) : ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಕೂಡಿ ಹಾಕಿದ ಆರೋಪವನ್ನು ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರ ಶಾಲೆಯ ಮಾನ್ಯತೆ ರದ್ದು ಮಾಡಲು ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ಶಿಫಾರಸ್ಸು ಮಾಡಿದೆ.
ನಕಲಿ ದಾಖಲೆ ಪತ್ರ ನೀಡಿ ಕಾನೂನು ಉಲ್ಲಂಘನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು ಮಾನ್ಯತೆ ರದ್ದು ಮಾಡಲು ಶಿಫಾರಸ್ಸು ಮಾಡಿಲಾಗಿದೆ.
ಶಾಲೆ ನಿರ್ಮಿಸಿರುವ ಸ್ಥಳವು ರೈತದ ಹೆಸರಿನಲ್ಲಿದ್ದು ಕೃಷಿ ಭೂಮಿಯಾಗಿದೆ. ಈ ಜಾಗವು ಯಾವುದೇ ಟ್ರಸ್ಟ್ ಹೆಸರಿನಲ್ಲಿ ಇಲ್ಲ. ಈ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸುವ ಅವಕಾಶ ಇಲ್ಲದ ಕಾರಣದಿಂದಾಗಿ ಈ ಕೂಡಲೇ ಈ ಶಾಲೆಯ ಮಾನ್ಯತೆಯನ್ನು ರದ್ದು ಮಾಡಬೇಕೆಂದು ರಾಜ್ಯ ಶಿಕ್ಷಣ ಇಲಾಖೆ ಸೂಚನೆ ಹೊರಡಿಸಿದೆ.
ಈ ನಡುವೆ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಕೂಡಿ ಹಾಕಿದ ಆರೋಪಿಯಾಗಿರುವ ನಿತ್ಯಾನಂದ ಅವರು ಪರಾರಿಯಾಗಿದ್ದು, ಆತ ನಿತ್ಯಾನಂದನ ಪಾಸ್ಪೋರ್ಟ್ ನವೀಕರಿಸಲಾಗಿಲ್ಲ ಎಂದು ಬೆಂಗಳೂರು ಪಾಸ್ಪೋರ್ಟ್ ಕಚೇರಿ ದೃಢಪಡಿಸಿದೆ ಎಂದು ವರದಿಯಾಗಿದೆ.