ಚೆನ್ನೈ, ನ 24(Daijiworld News/MB) : ದಿನಗೂಲಿ ಕಾರ್ಮಿಕನೊಬ್ಬ ಆಗ ತಾನೇ ಹುಟ್ಟಿದ ಹೆಣ್ಣು ಮಗುವನ್ನು ಮಾರಿ ಮೊಬೈಲ್ ಹಾಗೂ ಚಿನ್ನದ ಸರ ಖರೀದಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹಣಕ್ಕಾಗಿ ಅವಳಿ ಮಕ್ಕಳ ಪೈಕಿ ಹೆಣ್ಣು ಮಗುವನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡಿದ್ದ ಆರೋಪಿ ತಂದೆ ಯೇಸುರುಧಯರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಯೇಸುರುಧಯರಾಜ್ ಪತ್ನಿ ಪುಷ್ಪಲತಾ ನವೆಂಬರ್ 8ರಂದು ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ದಂಪತಿಗೆ ಈಗಾಗಲೇ ಒಬ್ಬಳು ಮಗಳಿದ್ದ ಕಾರಣದಿಂದ ಇನ್ನೊಂದು ಹೆಣ್ಣು ಮಗು ಬೇಡ ಎಂದು ನಿರ್ಧಾರ ಮಾಡಿದ ಪತಿ, ದಲ್ಲಾಳಿಗಳ ಮುಖಾಂತರ ತಿರುನೆಲ್ವೇಲಿಯಲ್ಲಿ ಮಕ್ಕಳಿಲ್ಲದವರು ಇದ್ದರೆ ತಿಳಿಸಿ. ಹೆಣ್ಣು ಮಗುವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾನೆ. ಮಗು ಮಾರಾಟವಾದ ಬಳಿಕ ದೊರೆತ 1 ಲಕ್ಷದ 80 ಸಾವಿರದಲ್ಲಿ 80 ಸಾವಿರವನ್ನು ಹಂಚಿಕೊಂಡ ಮೂವರು ಬ್ರೋಕರ್ ಗಳು ಉಳಿದ ಹಣವನ್ನು ಆರೋಪಿಗೆ ನೀಡಿದ್ದಾರೆ.
ಮಗುವನ್ನು ಮಾರಾಟ ಮಾಡಿದ ವಿಷಯ ಪತ್ನಿಗೆ ತಿಳಿಯದ ಕಾರಣ ಹಣ ಸಿಕ್ಕ ಕೂಡಲೇ ಆತ ಮದ್ಯ ಹಾಗೂ ಮೊಬೈಲ್ ನ್ನು ಖರೀದಿ ಮಾಡಿದ್ದಾನೆ. ಹಾಗೆಯೇ ತನ್ನ ಗಂಡು ಮಗುವಿಗೆ ಚಿನ್ನವನ್ನು ಖರೀದಿ ಮಾಡಿದ್ದು, ತಾನು ಅಡ ಇಟ್ಟಿದ್ದ ಬೈಕ್ ಹಾಗೂ ಸೈಕಲ್ ನನ್ನು ಬಿಡಿಸಿಕೊಂಡಿದ್ದಾನೆ.
ಈ ಬಳಿಕ ತನ್ನ ಮಗುವನ್ನು ಪತಿ ಮಾರಾಟ ಮಾಡಿರುವ ವಿಷಯ ತಿಳಿದ ಪತ್ನಿ, ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಇವರ ಬೊಬ್ಬೆ ಕೇಳಿ ಆಸ್ಪತ್ರೆಯ ನರ್ಸ್ ಸ್ಥಳೀಯ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಆಸ್ಪತ್ರಗೆ ಬಂದ ಪೊಲೀಸರು ಮೂವರು ಬ್ರೋಕರ್ ಗಳು ಹಾಗೂ ಆರೋಪಿ ಯೇಸುರುಧಯರಾಜ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.